ಸೂರ್ಯಸಿಟಿ ಕ್ರೀಡಾ ಸಮುಚ್ಚಯಕ್ಕೆ ಮೆಟ್ರೋ ಸಂಪರ್ಕ! | metro

ಗುಲಾಬಿ ಮಾರ್ಗ
ಗುಲಾಬಿ ಮಾರ್ಗ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆನೇಕಲ್​ನಲ್ಲಿ ನೂತನವಾಗಿ ನಿರ್ಮಾಣವಾಗುವ ಕ್ರಿಕೆಟ್​ ಕ್ರೀಡಾಂಗಣ ಸೇರಿ ಕ್ರೀಡಾ ಸಮುಚ್ಚಯಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಯೋಜನೆ ರೂಪಿಸುತ್ತಿದೆ.
ನಮ್ಮ ಮೆಟ್ರೋದ ಬಹುನಿರೀತ ಯೋಜನೆಯ ಭಾಗವಾದ ಗುಲಾಬಿ ಮಾರ್ಗ ಕಾಳೇನ ಅಗ್ರಹಾರ ಹಾಗೂ ಕಾಡುಗೋಡಿ ಸಂಪರ್ಕಿಸುತ್ತಿದ್ದು, (68 ಕಿ.ಮೀ) ಮಾರ್ಗ ಮಧ್ಯೆ ಜಿಗಲ್ಲೆಯಿಂದ ಕವಲೊಡೆಸಿ 3-4 ಕಿ.ಮೀ ವರೆಗೆ ಆನೇಕಲ್​ ಕಡೆಗೆ ಕೊಂಡೊಯ್ಯಲು ಬಿಎಂಆರ್​ಸಿಎಲ್​ ಮುಂದಗಿದೆ. ಇದರಿಂದ ಬನ್ನೇರುಘಟ್ಟ ಮತ್ತು ಆನೇಕಲ್​ ಕಡೆಯಿಂದ ಬರುವ ಜನರು ಆನೇಕಲ್​ ಸೂರ್ಯಸಿಟಿಯಲ್ಲಿ ನಿಮಾರ್ಣವಾಗಲಿರುವ ಕ್ರೀಡಾ ಸಂಕೀರ್ಣಕ್ಕೆ ತಲುಪಲು ಅನುಕೂಲವಾಗಲಿದೆ. ಮುಖ್ಯ ಮಾರ್ಗವು ತನ್ನ ಹಾದಿಯಲ್ಲಿ ಮುಂದುವರಿಯಲಿದೆ ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಸರ್ಕಲ್​ ಹಾಗೂ ವರ್ತೂರು ಕೋಡಿ ಸಂಪರ್ಕಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗದ ವಿನ್ಯಾಸ, ಪ್ರಯಾಣಿಕರ ಬೇಡಿಕೆ, ಭೂಸ್ವಾಧಿನ, ಯೋಜನಾ ವೆಚ್ಚ, ಮಾರ್ಗದ ನಡುವಿನ ನಿಲ್ದಾಣಗಳು ಸೇರಿ ಇತರೆ ಅಂಶಗಳ ಕುರಿತ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲು ದೆಹಲಿ ಮೂಲದ ಇಟ್ರೋಸಾಫ್ಟ್​ ಸಲ್ಯೂಶನ್ಸ್​ ಪ್ರೈ.ಗೆ ಜವಾಬ್ದಾರಿ ವಹಿಸಲಾಗಿದೆ. ಕಳೆದ ಜೂನ್​ ತಿಂಗಳಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ ಗೃಹ ಮಂಡಳಿ, ಆನೇಕಲ್​ ತಾಲೂಕಿನ ಸೂರ್ಯನಗರ 4 ನೇ ಹಂತದಲ್ಲಿ 75 ಎಕರೆ ಪ್ರದೇಶದಲ್ಲಿ ಸುಮಾರು 1650 ಕೋಟಿ ರೂ.ವೆಚ್ಚದಲ್ಲಿ ಕ್ರಿಕೆಟ್​ ಸ್ಟೇಡಿಯಂ ಸೇರಿದಂತೆ ಬಹುಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net