'ಟ್ವಿಟರ್'​ಗೆ ಟಕ್ಕರ್​ ಕೊಡಲು 'ಥ್ರೆಡ್ಸ್'​ ಆ್ಯಪ್​ ಸಜ್ಜು: ಶೀಘ್ರದಲ್ಲೇ ಮೆಟಾ ಕಂಪನಿಯಿಂದ ಉದ್ಘಾಟನೆ

Meta Threads App
Published on

ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಹಾಗೂ ಮೈಕ್ರೋಬ್ಲಾಗಿಂಗ್ ವೇದಿಕೆ "ಟ್ವಿಟರ್"​ಗೆ ಪರ್ಯಾಯವಾಗಿ​​ "ಥ್ರೆಡ್ಸ್​" ಆ್ಯಪ್​ ಉದ್ಘಾಟಿಸಲು ಮೆಟಾ ಕಂಪನಿ ಯೋಜನೆ ರೂಪಿಸಿದೆ. ಟ್ವಿಟರ್​ನಲ್ಲಿ ಹಲವು ನಿರ್ಬಂಧಗಳನ್ನು ಹೇರುತ್ತಿರುವ ನಡುವೆಯೇ ಥ್ರೆಡ್ಸ್​ ಉದ್ಘಾಟನೆಯಾಗುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಥ್ರೆಡ್ಸ್​ ಒಂದು ಇನ್​ಸ್ಟಾಗ್ರಾಂ ವಿಷಯ ಅಥವಾ ಬರಹ ಆಧಾರಿತ ಸಂಭಾಷಣೆ ಆ್ಯಪ್​ ಆಗಿದೆ. ಜುಲೈ 6ರಂದು ಲಭ್ಯವಾಗುವ ನಿರೀಕ್ಷೆ ಇದೆ. ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುವ ಖಾತೆಗಳನ್ನು ಅದೇ ಯೂಸರ್​ ನೇಮ್​ನೊಂದಿಗೆ ಥ್ರೆಡ್ಸ್​ನಲ್ಲೂ ಫಾಲೋ ಮಾಡಲು ಬಳಕೆದಾರರಿಗೆ ಅನುಮತಿ ನೀಡಲಾಗುತ್ತದೆ.

ಟ್ವಿಟರ್​ ಡೆಕ್​ ಅನ್ನು ಬಳಸಲು ವೆರಿಫೈ ಅಗತ್ಯತೆ ಸೇರಿದಂತೆ ಅಪ್ಲಿಕೇಶನ್‌ನಲ್ಲಿ ಟ್ವಿಟರ್, ಹಲವು ನಿರ್ಬಂಧಗಳನ್ನು ಘೋಷಿಸಿದ ಬೆನ್ನಲ್ಲೇ ಮೆಟಾ ಕಂಪನಿ ಥ್ರೆಡ್ಸ್​ ಉದ್ಘಾಟನೆಗೆ ಸಜ್ಜಾಗಿದೆ.

ಕೆಲವು ದಿನದ ಹಿಂದಷ್ಟೇ ಟ್ವಿಟರ್​ ಮಾಲೀಕ ಎಲಾನ್​ ಮಸ್ಕ್​, ಡೇಟಾ ಸ್ಕ್ರ್ಯಾಪಿಂಗ್ ಪರಿಹರಿಸಲು ಕೆಲವು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಇದು ಟ್ವಿಟರ್ ಬಳಕೆದಾರರು ಮತ್ತು ಜಾಹೀರಾತು ತಜ್ಞರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಕಳೆದ ತಿಂಗಳಷ್ಟೇ ಟ್ವಿಟರ್​ ಸಿಇಒ ಆಗಿ ಕೆಲಸ ಪ್ರಾರಂಭಿಸಿದ ಲಿಂಡಾ ಯಾಕರಿನೊ ಅವರನ್ನು ಈ ನಿಯಮ ದುರ್ಬಲಗೊಳಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net