ಕೆಲಸಕ್ಕೆಂದು ಆಫ್ರಿಕಾಗೆ ಹೋಗಿದ್ದ ಮೈಸೂರಿನ ಯುವಕ ದುರಂತ ಸಾವು: ಪಾಲಕರಲ್ಲಿ ಮುಗಿಲು ಮುಟ್ಟಿದ ಆಕ್ರಂದನ

Mysuru Youth
Published on

ಮೈಸೂರು: ಕೆಲಸಕ್ಕೆಂದು ದೂರದ ಆಫ್ರಿಕಾ ದೇಶಕ್ಕೆ ಹೋಗಿದ್ದ ಯುವಕನೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದು, ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಎಫ್ರಾಹಿಂ (20) ಮೃತ ದುರ್ದೈವಿ. ಎಚ್​ಡಿ ಕೋಟೆ‌ ತಾಲೂಕಿನ ಟೈಗರ್ ಬ್ಲಾಕ್​ನ ನಿವಾಸಿ. ಹಕ್ಕಿಪಿಕ್ಕಿ ಸಮುದಾಯದ ಎಫ್ರಾಹಿಂ, ಅಮಿತ್ ಮತ್ತು ಮಂಜುಳ ದಂಪತಿಯ ಪುತ್ರ. ಈತ ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದ.

ಎಫ್ರಾಹಿಂ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಈ ಬಗ್ಗೆ ತಂದೆ-ತಾಯಿ ಜೊತೆ ದೂರವಾಣಿಯಲ್ಲಿಯೂ ಮಾತನಾಡಿದ್ದ. ಆತನನ್ನು ಜೊತೆಗಿದ್ದವರು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮಗನ ಸಾವಿನ ಸುದ್ದಿ ಕೇಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತಾ ಎಂಬ ಆತಂಕದಲ್ಲಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರಿಸುವಂತೆ ಪಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net