

ಬಣಕಲ್: ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ವಿದ್ಯುತ್ ಸೇವೆ ನೀಡುವ ಉದ್ದೇಶದಿಂದ ನಮ್ಮೂರು ಕೊಟ್ಟಿಗೆಹಾರ ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ಮೆಸ್ಕಾಂ ಸಿಬ್ಬಂದಿಗೆ ಅಲ್ಯುಮಿನಿಯಂ ಏಣಿ ಕೊಡುಗೆಯಾಗಿ ನೀಡಲಾಯಿತು.
ಗ್ರೂಪ್ ಸದಸ್ಯರಾದ ತನು, ಸಂಜಯ್ ಗೌಡ ಮಾತನಾಡಿ, ಕೊಟ್ಟಿಗೆಹಾರದಲ್ಲಿ ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ. ಮೆಸ್ಕಾಂ ಸಿಬ್ಬಂದಿ ಮಳೆಗಾಲದಲ್ಲಿ ಕಂಬ ಹತ್ತಿ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯ. ಹಾಗಾಗಿ ಗ್ರೂಪ್ ಸದಸ್ಯರು ವಂತಿಗೆ ಹಾಕಿ 3,600 ರೂ. ಮೊತ್ತದ ಇಪ್ಪತ್ತು ಅಡಿ ಉದ್ದದ ಏಣಿಯನ್ನು ಸಿಬ್ಬಂದಿಗೆ ನೀಡಿದ್ದೇವೆ ಎಂದರು.
ಮೆಸ್ಕಾಂ ಸಿಬ್ಬಂದಿ ದೀಪಕ್, ಪವನ್, ಶಶಿ, ಮುಖಂಡರಾದ ತನು ಕೊಟ್ಟಿಗೆಹಾರ, ಸಂಜಯ್, ಕೃಷ್ಣಮೂರ್ತಿ, ವೀರಪ್ಪಗೌಡ, ರಾಜು, ಸಂತೋಷ್ ಅತ್ತಿಗೆರೆ, ನಾಗರಾಜ್ ಆಚಾರ್ಯ, ಅನಿಲ್ ಅತ್ತಿಗೆರೆ, ಎ.ಆರ್.ಅಭಿಲಾಷ್, ರಘು ಅತ್ತಿಗೆರೆ, ಜೀಯಾ, ವಿಕ್ರಂಗೌಡ, ಆದರ್ಶ ತರುವೆ, ಬೇಬಿ, ಅಶೋಕ್ ಮಲ್ಲಂದೂರು, ಪ್ರಶಾಂತ್ ತರುವೆ, ಎ.ಎಂ.ಹಸೇನ, ಬಿ.ಎಂ.ಸುರಕ್ಷಿತ್ ಇತರರಿದ್ದರು.