

ನವದೆಹಲಿ: ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶದ ಫತೇ ಕಚೋರಿಯಲ್ಲಿರುವ ಹೋಟೆಲ್ವೊಂದರಲ್ಲಿ ಊಟ ಮಾಡುತ್ತಿದ್ದ ಅನೇಕ ಜನರಿಗೆ ನರಕ ತೋರಿಸಿದ ವಕೀಲ ಚಾಲಕ, ವೇಗವಾಗಿ ತನ್ನ ಮರ್ಸಿಡಿಸ್ ಕಾರು ಚಾಲನೆ ಮಾಡಿದ ಪರಿಣಾಮ ಹೋಟೆಲ್ವೊಳಗೆ ನುಗ್ಗಿದೆ. ಘಟನೆಯಲ್ಲಿ 6 ಜನರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದ ಈ ಆಘಾತಕಾರಿ ಘಟನೆ ಹೋಟೆಲ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದಿದೆ. ವಕೀಲ ಚಲಾಯಿಸುತ್ತದ್ದ ಕಾರು ತಮ್ಮತ್ತ ವೇಗವಾಗಿ ಬರುತ್ತಿರುವುದನ್ನು ಕಂಡ ಕೆಲವು ಗ್ರಾಹಕರು ಗಾಬರಿಯಿಂದ ಓಡಿ ಹೋಗುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಕಾರು ಗುದ್ದಿದ ರಭಸಕ್ಕೆ ಹೋಟೆಲ್ನ ಟೇಬಲ್ ಎಲ್ಲವೂ ಚೆಲ್ಲಾಪಿಲ್ಲಿ ಆಗಿದೆ.
ಕಾರಿನ ಬಾನೆಟ್ ಮುಂದೆಯೇ ಇದ್ದ ಮತ್ತೊಬ್ಬ ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿದೆ. ಪೊಲೀಸರ ಪ್ರಕಾರ, ಕಾರನ್ನು 36 ವರ್ಷದ ವಕೀಲರೊಬ್ಬರು ಚಲಾಯಿಸುತ್ತಿದ್ದರು ಎಂದು ಹೇಳಿದ್ದಾರೆ. ಅಪಘಾತ ಮಾಡಿದ ಚಾಲಕನನ್ನು ನೋಯ್ಡಾ ನಿವಾಸಿ ಪರಾಗ್ ಮೈನಿ ಎಂದು ಪತ್ತೆಹಚ್ಚಲಾಗಿದೆ. ಅತಿವೇಗದ ಚಾಲನೆ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ,(ಏಜೆನ್ಸೀಸ್).