More

    ರೂ. 46ರಿಂದ 35 ಪೈಸೆಗೆ ಕುಸಿದಿದ್ದ ಷೇರು: ಒಂದು ವರ್ಷದಲ್ಲಿ 671% ಹೆಚ್ಚಳವಾಗಿ ಹೂಡಿಕೆದಾರಿಗೆ ಲಾಭದ ಸುರಿಮಳೆ

    ಮುಂಬೈ: ಹಣಕಾಸು ಕಂಪನಿಯಾದ ಬ್ಲೂ ಚಿಪ್ ಇಂಡಿಯಾ ಲಿಮಿಟೆಡ್​ (Blue Chip India Ltd) ಷೇರುಗಳು ಕಳೆದ 1 ವರ್ಷದಲ್ಲಿ ತನ್ನ ಹೂಡಿಕೆದಾರರಿಗೆ ಅತ್ಯುತ್ತಮ ಆದಾಯವನ್ನು ನೀಡಿವೆ.

    ಈ ಅವಧಿಯಲ್ಲಿ ಈ ಪೆನ್ನಿ ಸ್ಟಾಕ್ 671% ಏರಿಕೆಯಾಗಿದೆ. ಮಾರ್ಚ್ 2023 ರಲ್ಲಿ ರೂ. 0.35 ಇದ್ದ ಈ ಸ್ಟಾಕ್​ ಬೆಲೆ ಈಗ ರೂ. 2.7 ಕ್ಕೆ ವಹಿವಾಟು ನಡೆಸುತ್ತಿದೆ. ಏತನ್ಮಧ್ಯೆ, ಮಾರ್ಚ್ 2020 ರಿಂದ ಕಳೆದ 4 ವರ್ಷಗಳಲ್ಲಿ, ಈ ಷೇರುಗಳು ಅನೇಕ ಪಟ್ಟು ಆದಾಯವನ್ನು ನೀಡಿವೆ. ಈ ಅವಧಿಯಲ್ಲಿ ರೂ. 0.1ರಿಂದ ಶೇ 2600ರಷ್ಟು ಏರಿಕೆಯಾಗಿದೆ. ಅಂದರೆ ಹೂಡಿಕೆದಾರರು ಈ ಅವಧಿಯಲ್ಲಿ ಬಲವಾದ ಆದಾಯವನ್ನು ಪಡೆದಿದ್ದಾರೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 46.40 ರೂಪಾಯಿ ಆಗಿದೆ.

    ಈ ವರ್ಷದ ಆರಂಭದಿಂದ ಇದುವರೆಗೆ 3 ತಿಂಗಳಿನಲ್ಲಿ 5.88 ಪ್ರತಿಶತದಷ್ಟು ಹೆಚ್ಚಾಗಿದೆ. ಫೆಬ್ರವರಿಯಲ್ಲಿ ಶೇಕಡಾ 27 ಮತ್ತು ಜನವರಿಯಲ್ಲಿ ಶೇಕಡಾ 4ಕ್ಕಿಂತ ಹೆಚ್ಚು ಏರಿಕೆಯಾದ ನಂತರ, ಮಾರ್ಚ್‌ನಲ್ಲಿ ಅಂದಾಜು ಶೇಕಡಾ 17ರಷ್ಟು ಕಡಿಮೆಯಾಗಿದೆ.

    ಬ್ಲೂ ಚಿಪ್ ಇಂಡಿಯಾ ಲಿಮಿಟೆಡ್ ಭಾರತದಲ್ಲಿ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದು ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುತ್ತದೆ ಮತ್ತು ಸಾಲ ನೀಡುತ್ತದೆ. ಬ್ಲೂಚಿಪ್ ಇಂಡಿಯಾ ಲಿಮಿಟೆಡ್ ಅನ್ನು 1993 ರಲ್ಲಿ ಸ್ಥಾಪಿಸಲಾಯಿತು. ಇದು ಭಾರತದ ಕೋಲ್ಕತ್ತಾದಲ್ಲಿ ನೆಲೆಗೊಂಡಿದೆ. ಬ್ಲೂಚಿಪ್ ಇಂಡಿಯಾ ಡಿಸೆಂಬರ್ ತ್ರೈಮಾಸಿಕದಲ್ಲಿ 0.02 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ.

    ರೂ. 2,641ರಿಂದ 290ಕ್ಕೆ ಕುಸಿದ ರಿಲಯನ್ಸ್​ ಷೇರು: ಈಗ ಅನಿಲ್​ ಅಂಬಾನಿ ಕಂಪನಿಯ ಸ್ಟಾಕ್​ ಬೆಲೆ ಏರುತ್ತಿರುವುದೇಕೆ?

    ಮಂಗಳವಾರ ಅಪ್ಪರ್​ ಸರ್ಕ್ಯೂಟ್​ ಹಿಟ್ ಆದ ಸ್ಟಾಕ್​ಗಳು: ಬುಧವಾರ ಈ ಷೇರುಗಳಲ್ಲಿ ಲಾಭ ಸಾಧ್ಯತೆ

    ಬೋನಸ್​ ಷೇರು, ಸ್ಟಾಕ್​ ವಿಭಜನೆ: ಕಾಂಡೋಮ್​ ಕಂಪನಿ ಷೇರುಗಳಿಗೆ ಈಗ ಭಾರೀ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts