ರೂ. 2,641ರಿಂದ 290ಕ್ಕೆ ಕುಸಿದ ರಿಲಯನ್ಸ್​ ಷೇರು: ಈಗ ಅನಿಲ್​ ಅಂಬಾನಿ ಕಂಪನಿಯ ಸ್ಟಾಕ್​ ಬೆಲೆ ಏರುತ್ತಿರುವುದೇಕೆ?

reliance-8
Published on

ಮುಂಬೈ: ಅನಿಲ್ ಅಂಬಾನಿ ಅವರ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಷೇರುಗಳಲ್ಲಿ ಬಿರುಸಿನ ಏರಿಕೆ ಕಂಡುಬಂದಿದೆ. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಷೇರುಗಳ ಬೆಲೆ ಮಂಗಳವಾರ ಶೇಕಡಾ 8ಕ್ಕಿಂತ ಹೆಚ್ಚು ಏರಿಕೆ ಕಂಡು 293.95 ರೂ. ತಲುಪಿದೆ.

ಕಂಪನಿಯ ಷೇರುಗಳ ಬೆಲೆ ಮಂಗಳವಾರ 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಸಾಲ ಮರುಪಾವತಿಗೆ ಸಂಬಂಧಿಸಿದ ದೊಡ್ಡ ಸುದ್ದಿ ಬೆಳಕಿಗೆ ಬಂದ ನಂತರ ರಿಲಯನ್ಸ್ ಇನ್ಫ್ರಾ ಷೇರುಗಳಲ್ಲಿ ಈ ಏರಿಕೆಯಾಗಿದೆ.

ರಿಲಯನ್ಸ್ ಇನ್ಫ್ರಾ ಕಂಪನಿಯು ಜೆಸಿ ಫ್ಲವರ್ಸ್ ಅಸೆಟ್ ಅನ್ನು ಸೆಟಲ್​ಮೆಂಟ್​ ಒಪ್ಪಂದದ ನಿಯಮಗಳ ಪ್ರಕಾರ ಸ್ವಾಧೀನಪಡಿಸಿಕೊಂಡಿದೆ ಎಂದು ಹೇಳಿದೆ. ತನ್ನ ಹೊಣೆಗಾರಿಕೆಯ ಭಾಗಶಃ ಪಾವತಿಯನ್ನು ಮಾಡಿದೆ. ಅಲ್ಲದೆ, ಸೆಟಲ್​ಮೆಂಟ್​ ಒಪ್ಪಂದವನ್ನು ಮಾರ್ಪಡಿಸಲಾಗಿದೆ.

ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ಕಳೆದ 4 ವರ್ಷಗಳಲ್ಲಿ ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ 3000% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ರಿಲಯನ್ಸ್ ಇನ್ಫ್ರಾ ಷೇರುಗಳ ಬೆಲೆ ಮಾರ್ಚ್ 27, 2020 ರಂದು 9.20 ರೂ. ಇತ್ತು. ಏಪ್ರಿಲ್ 2, 2024 ರಂದು ರೂ 293.95 ತಲುಪಿದೆ. ಕಳೆದ ಒಂದು ವರ್ಷದಲ್ಲಿ, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಷೇರುಗಳ ಬೆಲೆ 100% ಕ್ಕಿಂತ ಹೆಚ್ಚು ಜಿಗಿದಿದೆ. ಕಂಪನಿಯ ಷೇರುಗಳ ಬೆಲೆ ಏಪ್ರಿಲ್ 3, 2023 ರಂದು 146.35 ರೂ. ಇತ್ತು. ಈಗ 293.95 ರೂ.ಗೆ ತಲುಪಿದೆ. ಕಂಪನಿಯ ಷೇರುಗಳ 52 ವಾರಗಳ ಕನಿಷ್ಠ ಬೆಲೆ 131.40 ರೂ. ಇದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 2,641 ಹಾಗೂ ಕನಿಷ್ಠ ಬೆಲೆ ರೂ. 8.65 ಇದೆ. ಈ ಷೇರು ಬೆಲೆ ಕಳೆದ ಒಂದು ವಾರದಲ್ಲಿ 5.88% ಹಾಗೂ ಕಳೆದ ಒಂದು ತಿಂಗಳಲ್ಲಿ 28.20%ರಷ್ಟು ಏರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net