More

    ಬೋನಸ್​ ಷೇರು, ಸ್ಟಾಕ್​ ವಿಭಜನೆ: ಕಾಂಡೋಮ್​ ಕಂಪನಿ ಷೇರುಗಳಿಗೆ ಈಗ ಭಾರೀ ಬೇಡಿಕೆ

    ನವದೆಹಲಿ: ಮಂಗಳವಾರ ಭಾರತೀಯ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿದೆ. ಈ ದುರ್ಬಲ ಮಾರುಕಟ್ಟೆಯಲ್ಲಿಯೂ ಕ್ಯುಪಿಡ್ ಲಿಮಿಟೆಡ್​ (Cupid Ltd.) ಷೇರುಗಳ ಬೆಲೆ ಏರಿಕೆ ಕಂಡುಬಂದಿದೆ.

    ಷೇರುಪೇಟೆಯ ದುರ್ಬಲ ಕಾರ್ಯನಿರ್ವಹಣೆಯ ಅವಧಿಯಲ್ಲೂ, ಮಂಗಳವಾರ ಮಧ್ಯಾಹ್ನದ ವಹಿವಾಟಿನಲ್ಲಿ ಕ್ಯುಪಿಡ್ ಲಿಮಿಟೆಡ್‌ನ ಷೇರುಗಳು ಶೇಕಡಾ ಎರಡಕ್ಕಿಂತ ಹೆಚ್ಚು ಏರಿಕೆ ದಾಖಲಿಸಿ, ರೂ. 2400 ರ ಮಟ್ಟವನ್ನು ಮುಟ್ಟಿದ್ದವು. ಕ್ಯುಪಿಡ್ ಲಿಮಿಟೆಡ್ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ 2800 ಹಾಗೂ ಕನಿಷ್ಠ ಬೆಲೆ ರೂ 241 ಆಗಿದೆ.

    ಶೀಘ್ರದಲ್ಲೇ ಕಂಪನಿಯ ಷೇರುಗಳು 1 ರಿಂದ 10 ರ ಅನುಪಾತದಲ್ಲಿ ವಿಭಜನೆಯಾಗಲಿವೆ. ಕಂಪನಿಯು ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡಲು ನಿರ್ಧರಿಸಿದೆ. ಷೇರುಗಳ ಬೆಲೆ ಏರಿಕೆ ಇದೇ ಪ್ರಮುಖ ಕಾರಣವಾಗಿದೆ.

    ಕ್ಯುಪಿಡ್ ಲಿಮಿಟೆಡ್ ಕಂಪನಿಯು 3220 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ, ಇದು ಪುರುಷ ಮತ್ತು ಸ್ತ್ರೀ ಕಾಂಡೋಮ್‌ಗಳು, ವೈಯಕ್ತಿಕ ಲೂಬ್ರಿಕಂಟ್‌ಗಳು ಮತ್ತು ಇವಿಡಿ ಕಿಟ್‌ಗಳನ್ನು ತಯಾರಿಸುತ್ತದೆ.

    ಕ್ಯುಪಿಡ್ ಲಿಮಿಟೆಡ್ ವಿವಿಧ ಕಾರಣಗಳಿಂದ TFCL ನಲ್ಲಿ ಹೂಡಿಕೆ ಮಾಡುವ ಯೋಜನೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಘೋಷಿಸಿದೆ. TFCIL ನಲ್ಲಿ ಹೂಡಿಕೆಯನ್ನು ಮುಂದೂಡುವ ನಿರ್ಧಾರವನ್ನು ಮಾರುಕಟ್ಟೆಯ ಪರಿಸ್ಥಿತಿಗಳು ಮತ್ತು ದೀರ್ಘಾವಧಿಯ ವ್ಯವಹಾರ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ.

    ಕ್ಯುಪಿಡ್ ಲಿಮಿಟೆಡ್ ಈ ಸಮಯದಲ್ಲಿ ತನ್ನ ಸಂಪೂರ್ಣ ಗಮನವನ್ನು ತನ್ನ ಪ್ರಮುಖ ವ್ಯವಹಾರದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದೆ. ಕ್ಯುಪಿಡ್ ಲಿಮಿಟೆಡ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ ಒಂದು ಬೋನಸ್ ಷೇರನ್ನು ನೀಡಲು ನಿರ್ಧರಿಸಿದೆ. ಕಂಪನಿಯು ಸ್ಟಾಕ್ ಸ್ಪ್ಲಿಟ್ ಮತ್ತು ಬೋನಸ್ ಷೇರುಗಳಿಗೆ ದಾಖಲೆಯ ದಿನಾಂಕವಾಗಿ ಏಪ್ರಿಲ್ 4 ಅನ್ನು ನಿಗದಿಪಡಿಸಿದೆ.

    ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದ ಫಲಿತಾಂಶಗಳು ಪ್ರಕಟಗೊಳ್ಳಲಿವೆ. ಕ್ಯುಪಿಡ್ ಲಿಮಿಟೆಡ್ ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳನ್ನು ದೊಡ್ಡ ಐಟಿ ಕಂಪನಿಗಳ ಫಲಿತಾಂಶಗಳಿಗಿಂತ ಮೊದಲು ಬಿಡುಗಡೆ ಮಾಡಲಿದೆ ಎಂದು ಹೇಳಿದೆ. ಕ್ಯುಪಿಡ್ ಲಿಮಿಟೆಡ್ ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳನ್ನು ಏಪ್ರಿಲ್ 8 ರಂದು ಬಿಡುಗಡೆ ಮಾಡುತ್ತಿದೆ. ಐಟಿ ಉದ್ಯಮ ದೈತ್ಯ ಟಿಸಿಎಸ್‌ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳು ಏಪ್ರಿಲ್ 12 ರಂದು ಮತ್ತು ಇನ್ಫೋಸಿಸ್‌ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳು ಏಪ್ರಿಲ್ 18 ರಂದು ಬಹಿರಂಗಗೊಳ್ಳಲಿವೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts