VIDEO | ಮರ್ಸಿಡಿಸ್ ಬೆಂಜ್‌ಗೊಂದು ಕಾಲ, ಆಟೋ ರಿಕ್ಷಾಕ್ಕೊಂದು ಕಾಲ!

Mercedes pushed by auto rickshaw in Pune leaves
Published on

ಪುಣೆ: ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಹಾಗೂ ತಮಾಷೆ ಎನಿಸುವಂತಹ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಂತದ್ದೇ ವಿಡಿಯೋವನ್ನು ವೈರಲ್ ಆಗುತ್ತಿದ್ದೆ. ಇದನ್ನು ನೋಡಿದ ಜನರು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ.

ನಗರ ಪ್ರದೇಶಗಳ ರಸ್ತೆ ಮಧ್ಯೆ ಯಾವುದೇ ವಾಹನಗಳು ಕೆಟ್ಟು ನಿಂತರೆ ಟೋಯಿಂಗ್ ಮಾಡಲಾಗುತ್ತದೆ. ಆದರೆ ಗ್ರಾಮೀಣ ಭಾಗಗಲ್ಲಿ ಹೀಗಲ್ಲ, ಯಾವುದಾದರು ವಾಹನ ರಸ್ತೆ ಮಧ್ಯೆ ಬಾಕಿಯಾದರೆ, ಬೇರೆ ಗೂಡ್ಸ್ ವಾಹನಕ್ಕೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗಲಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋ ಈ ದೃಶ್ಯವನ್ನು ನೆನಪಿಸುವಂತಿದೆ.

ಅತ್ಯಂತ ದುಬಾರಿ ಬೆಲೆಯ ಕಾರುಗಳಲ್ಲಿ ಮರ್ಸಿಡಿಸ್ ಬೆಂಜ್‌ ಕಾರುಗಳಿಗೆ ಅಗ್ರಸ್ಥಾನ. ಇದೀಗ ಈ ಬೆಂಜ್‌ ಕಾರನ್ನು ಆಟೋ ಚಾಲಕನೊಬ್ಬ ತನ್ನ ಕಾಲಿನಿಂದ ತಳ್ಳಿಕೊಂಡು ಹೋಗಿದ್ದಾನೆ. ಅರ್ರೇ... ಇದು ಹೇಗೆ ಸಾಧ್ಯ ಎಂದು ಯೋಚಿಸಬಹುದು! ಆದರೆ ಸಾಧ್ಯ ಎಂಬುದಕ್ಕೆ ವೈರಲ್ ಆಗಿರುವ ಈ ವಿಡಿಯೋ ಸಾಕ್ಷಿ.

ವಿಡಿಯೋದಲ್ಲಿ ಆಟೋ ಚಾಲಕ ಚಲಿಸುತ್ತಿರುವಾಗಲೇ ಕೆಂಪು ಬಣ್ಣದ ಮರ್ಸಿಡಿಸ್ ಬೆಂಜ್‌ ಕಾರನ್ನು ತಳ್ಳುತ್ತಿರುವುದು ಕಾಣಬಹುದು. ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಐಷಾರಾಮಿ ಕಾರಿಗೆ ಆಟೋ ರಿಕ್ಷಾ ಸಹಾಯಹಸ್ತ ಚಾಚಿದೆ ಎಂದಿದ್ದಾರೆ. ಇನ್ನೊಬ್ಬರು ಮರ್ಸಿಡಿಸ್ ಬೆಂಜ್‌ ಕಾರು ಮೆಕ್ಯಾನಿಕ್ ಬಳಿ ತಲುಪಲ್ಲಿ ಆಟೋ ರಿಕ್ಷಾ ಡ್ರಾಪ್ ನೀಡಿದೆ ಎಂದು ಲೇವಡಿ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net