ಮನೆಯಲ್ಲಿ ಮಲಗಿದ್ದ ಮಗನ ಪ್ರಾಣ ತೆಗೆದ ಮಾನಸಿಕ ಅಸ್ವಸ್ಥ ತಾಯಿ

police
ಸಾಂದರ್ಭಿಕ ಚಿತ್ರ
Published on

ಉದಯಪುರ: ಮಾನಸಿಕ ಅಸ್ವಸ್ಥ ತಾಯಿಯೊಬ್ಬಳು ತನ್ನ ಅಪ್ರಾಪ್ತ ವಯಸ್ಸಿನ ಮಗನ ಪ್ರಾಣ ತೆಗೆದಿರುವ ಘಟನೆ ರಾಜಸ್ಥಾನದ ಉದಯಪುರ ದಲ್ಲಿ ನಡೆದಿದೆ.

ಇದನ್ನೂ ಓದಿ: ಮಣಿಪುರ ಬೆತ್ತಲೆ ಮೆರವಣಿಗೆ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆಯರು

ಆರೋಪಿಯನ್ನು ಮನೀಶಾ (37) ಎಂದು ಗುರುತಿಸಲಾಗಿದ್ದು, ಪುರಂಜಯ್ (14) ಮೃತ ದುರ್ದೈವಿಯಾಗಿದ್ದಾನೆ. ಭಾನುವಾರದಂದು ಆಕೆಯ ಪತಿ ಬೆಳಗಿನ ಜಾವ ವಾಕಿಂಗ್‌ಗೆ ಹೋಗಿದ್ದ. ಈ ವೇಳೆ ಆಕೆ ಆತನ ಕತ್ತು ಹಿಸುಕು ಕೊಲೆ ಮಾಡಿದ್ದು, ಇದಾದ ಕೆಲವೇ ದಿನಗಳಲ್ಲಿ ಆಕೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾಳೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಆಕೆ ತನ್ನ ಮಗನನ್ನು ಏಕೆ ಕೊಲೆ ಮಾಡಿದಳು ಎಂಬುದಕ್ಕೆ ಇನ್ನುವರೆಗೆ ಯಾವುದೇ ನಿಖರ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಆದರೆ ಮನೀಶಾ ಕೆಲವು ಸಮಯದಿಂದ ಮಾನಸಿಕವಾಗಿ ತೊಂದರೆಗೀಡಾಗಿದ್ದು, ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಟುಂಬದವರು ಹೇಳಿದ್ದಾರೆ.(ಏಜೆನ್ಸೀಸ್)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net