ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಕಾತಿ

Doctors
Published on

ಬೆಂಗಳೂರು: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸೆಂಟ್ರಲ್ ಯುನಿವರ್ಸಿಟಿ ಆಫ್ ಕರ್ನಾಟಕ) ಜೀವ ವಿಜ್ಞಾನ ಶಿಕ್ಷಣ ಕೇಂದ್ರದ ಕೋವಿಡ್ 19 ಪರೀಕ್ಷಾ ಪ್ರಯೋಗಾಲಯ ಮತ್ತು ಸಂಶೋಧನೆಗೆ ವಿವಿಧ ಹುದ್ದೆಗಳ ತಾತ್ಕಾಲಿಕ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೆಡಿಕಲ್ ಮೈಕ್ರೋಬಯಾಲಜಿಸ್ಟ್/ ರಿಸರ್ಚ್ ಅಸೋಸಿಯೇಟ್/ ರಿಸರ್ಚ್ ಸೈಂಟಿಸ್ಟ್ -1 ಹುದ್ದೆ ಇದೆ.

ಎಂಡಿ/ ಡಿಎನ್​​ಬಿ ಮೈಕ್ರೋಬಯಾಲಜಿ ಅಥವಾ ಎಂಎಸ್ಸಿ ಪಿಎಚ್​ಡಿ - ಮೈಕ್ರೋಬಯಾಲಜಿ/ ವೈರಾಲಜಿ/ ಬಯೋಟೆಕ್ನಾಲಜಿ / ಮಾಲಿಕ್ಯೂಲಾರ್ ಬಯಾಲಜಿ/ ಲೈಫ್ ಸೈನ್ಸಸ್ ಆಗಿರಬೇಕು. ನಿಗದಿತ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರಬೇಕು.

ಜೆಆರ್​ಎಫ್-1 ಹುದ್ದೆ ಇದೆ. ಮೇಲೆ ತಿಳಿಸಿದ ವಿಷಯಗಳಲ್ಲಿ ಎಂಎಸ್ಸಿ ಆಗಿರಬೇಕು.

ಲ್ಯಾಬ್ ಟೆಕ್ನೀಷಿಯನ್ 3 ಹುದ್ದೆಗಳಿವೆ. ಎಂಎಲ್​​ಟಿ ಅಥವಾ ಮೇಲೆ ತಿಳಿಸಿದ ವಿಷಯಗಳೊಂದಿಗೆ ಬಿಎಸ್ಸಿ ಆಗಿರಬೇಕು ಅಥವಾ ಡಿಎಂಎಲ್​ಸಿ ಆಗಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://www.cuk.ac.in ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net