More

    ಗಲ್ವಾನ್‌ ಘರ್ಷಣೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದಿದ್ದ ಚೀನಾಕ್ಕೆ ಹೀಗಾಗಬಾರದಿತ್ತು!

    ಬೀಜಿಂಗ್‌: ಗಲ್ವಾನ್‌ನಲ್ಲಿ ನಡೆದ ಭಾರತ ಮತ್ತು ಚೀನಿಯರ ನಡುವಿನ ಘರ್ಷಣೆಯಲ್ಲಿ ಚೀನಾದ 40ಕ್ಕೂ ಅಧಿಕ ಸೈನಿಕರನ್ನು ಭಾರತೀಯ ಯೋಧರು ಹೊಡೆದುರುಳಿಸಿರುವುದಾಗಿ ಭಾರತ ಹೇಳಿತ್ತು. ಆದರೆ ಚೀನಾ ಮಾತ್ರ ತನ್ನ ಒಬ್ಬರೇ ಒಬ್ಬ ಯೋಧರೂ ಸತ್ತಿಲ್ಲ ಎಂದು ಹೇಳುತ್ತಲೇ ಬಂದಿತ್ತು. ಚೀನಾವನ್ನೇ ಬೆಂಬಲಿಸಿದ್ದ ಕೆಲವು ಭಾರತೀಯರು ಕೂಡ ಚೀನಾದ ಹೇಳಿಕೆಗೆ ತಲೆದೂಗಿದ್ದರು.

    ಚೀನಾ ಸರ್ಕಾರದ ಮುಖವಾಣಿ ಇಂಗ್ಲಿಷ್ ಗ್ಲೋಬಲ್‌ ಟೈಮ್ಸ್‌ ‌ ಸಂಪಾದಕ ಈ ಹಿಂದೆ ಸಾವು ಸಂಭವಿಸಿದೆ ಎಂಬುದನ್ನು ಒಪ್ಪಿಕೊಂಡಿದ್ದರೂ ನಂತರ ಸೈನಿಕರು ಸತ್ತೇ ಇಲ್ಲ ಎಂದು ವಾದಿಸುತ್ತಲೇ ಬರಲಾಗಿತ್ತು. ಆದರೆ ಕಳ್ಳರು ಒಂದಿಲ್ಲೊಂದು ಸುಳಿವು ಬಿಟ್ಟೇ ಹೋಗುತ್ತಾರೆ ಎನ್ನುವುದಕ್ಕೆ ಚೀನಾ ಕೂಡ ಹೊರತಾಗಿಲ್ಲ. ಗಲ್ವಾನ್‌ ಕಣಿವೆಯಲ್ಲಿ ತನ್ನ ಸೈನಿಕರು ಸತ್ತೇ ಇಲ್ಲ ಎಂದು ಘಂಟಾಘೋಷವಾಗಿ ಚೀನಾ ಹೇಳುತ್ತಾ ಬಂದಿದ್ದರೂ, ತನಗೆ ಅರಿವಿಲ್ಲದಂತೆಯೇ ಒಂದು ಸಾಕ್ಷ್ಯವನ್ನು ಬಿಟ್ಟಿದ್ದು, ಅದೀಗ ಸಕತ್‌ ವೈರಲ್‌ ಆಗಿದೆ.

    ಇದನ್ನೂ ಓದಿ: ವಿಮಾನಯಾನ ಭದ್ರತಾ ಸಂಸ್ಥೆ ಮಹಾನಿರ್ದೇಶಕರ ಸ್ಥಾನಕ್ಕೆ ಮೊದಲ ಮಹಿಳೆ

    ಭಾರತೀಯ ಯೋಧರಿಂದ ತನ್ನ ದೇಶದ ಎಷ್ಟು ಸೈನಿಕರು ಹತರಾಗಿದ್ದಾರೆ ಎನ್ನುವುದು ತಿಳಿಯಬಾರದು ಎಂದು ಮೃತಪಟ್ಟ ಸೈನಿಕರ ಕುಟುಂಬದವರಿಗೂ ತಿಳಿಸದೇ ಚೀನಾ, ಎಲ್ಲ ಸೈನಿಕರನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಿತ್ತು ಎಂಬ ಬಗ್ಗೆ ಚೀನಾದಲ್ಲಿಯೇ ಅಸಮಾಧಾನ ಭುಗಿಲೆದ್ದಿತ್ತು. ಇದರ ನಡುವೆಯೂ ಇದೀಗ ಭಾರಿ ಸಾಕ್ಷ್ಯವೊಂದು ಸಿಕ್ಕಿಬಿಟ್ಟಿದೆ.

    ಅದೇನೆಂದರೆ ಚೀನಾ ಸೈನಿಕರ ಸ್ಮಾರಕ! ಚೀನಾದ ಸಾಮಾಜಿಕ ಜಾಲತಾಣವಾದ ವಿಬೋದದಲ್ಲಿ ಸೈನಿಕನೊಬ್ಬನ ಸಮಾಧಿಯ ಫೋಟೋ ವೈರಲ್‌ ಆಗಿದೆ.
    ದಕ್ಷಿಣದ ಕ್ಸಿನ್‌ಜಿಯಾಂಗ್‌ ಸೇನಾವಲಯದಲ್ಲಿ ಮೃತ ಯೋಧನ ಸಮಾಧಿಯನ್ನು ಸ್ಥಾಪನೆ ಮಾಡಲಾಗಿದೆ. ಈ ಸಮಾಧಿಯ ಮೇಲೆ ಚೆನ್‌ ಕ್ಸಿಯಾಂಗ್‌ರಾಂಗ್‌, 19316 ಪಡೆಯ ಯೋಧ. 2020ರ ಜೂನ್‌ನಲ್ಲಿ ಭಾರತದ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮನಾದ ಸೈನಿಕ ಎಂದು ಬರೆಯಲಾಗಿದೆ.

    ಈ ಮೂಲಕ ಚೀನಾ ತನ್ನ ಮೃತ ಸೈನಿಕರ ಬಗ್ಗೆ ಗುಟ್ಟು ಮಾಡಲು ನೋಡಿದರೂ, ಅದರ ಅರಿವಿಗೆ ಬಾರದೇ ಸಾಕ್ಷ್ಯವೊಂದು ಸಿಕ್ಕಿಬಿಟ್ಟಿದೆ.

    ಲಾಕ್‌ಡೌನ್‌ನಿಂದ ಪ್ರಾಣಿಗಳಿಗೂ ಬೊಜ್ಜು: ಆತಂಕದಲ್ಲಿ ಮೃಗಾಲಯ ಸಿಬ್ಬಂದಿ

    ಬೆಡ್‌ರೂಮ್‌ನಲ್ಲಿ ಪತಿಯ ಕೊಂದು, ಅಲ್ಲಿಯೇ ಸಮಾಧಿ ಮಾಡಿದಳು- ಕಾರಣ ಮಾತ್ರ ನಿಗೂಢ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts