ವಿದ್ಯಾರ್ಥಿಗಳಿಗೆ ಹೊರನಾಡಿನಿಂದ ಭೋಜನ

annapurneshwari
ಕಳಸ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಪ್ರಸಾದ ಭೋಜನವನ್ನು ಮಕ್ಕಳಿಗೆ ಬಡಿಸುವುದರ ಮೂಲಕ ಜಿ.ಭೀಮೇಶ್ವರ ಜೋಷಿ ಚಾಲನೆ ನೀಡಿದರು.
Published on

ಕಳಸ: ಕಳಸ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಕ್ರವಾರದಿಂದ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಪ್ರಸಾದ ಭೋಜನ ನೀಡಲಾಗುತ್ತಿದೆ.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಶುಕ್ರವಾರ ಪ್ರಸಾದ ಭೋಜನವನ್ನು ಮಕ್ಕಳಿಗೆ ಬಡಿಸುವುದರ ಮೂಲಕ ಚಾಲನೆ ನೀಡಿದರು.
ಹೊರನಾಡು ಕ್ಷೇತ್ರದಿಂದ ಹೊರನಾಡು ಸರ್ಕಾರಿ ಶಾಲೆ, ಕಳಸ ಪ್ರಬೋಧಿನಿ ವಿದ್ಯಾಕೇಂದ್ರ, ಕಳಸ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಅನ್ನ ಪ್ರಸಾದ ಭೋಜನ ನೀಡಲಾಗುತ್ತಿತ್ತು. ಇದೀಗ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಭೋಜನ ವಿಸ್ತರಿಸಿದಂತಾಗಿದೆ.
ಮಧ್ಯಾಹ್ನ ಭೋಜನದಿಂದ ಶಾಲಾ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅನ್ನಪೂರ್ಣೇಶ್ವರಿ ದೇವಸ್ಥಾನದ ಸೇವೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನ್ನದಾಸೋಹದ ಬಗ್ಗೆ ಪಾಲಕರು ಮತ್ತು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಫೀಕ್, ಉಪಾಧ್ಯಕ್ಷ ಚಂದ್ರಶೇಖರ್, ಪ್ರಾಚಾರ್ಯ ಅನಂತ ಪದ್ಮನಾಭ, ಪ್ರಾಧ್ಯಾಪಕರಾದ ಮುಕುಂದ್ ಕಿಶೋರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net