

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ, ಸದ್ಯ ಟ್ರಂಪ್ಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಜೋ ಬಿಡೆನ್ ಅವರು ಇಂದು ಭಾರತೀಯರಿಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.
ಯುಎಸ್ನಲ್ಲಿದ್ದು ಹಬ್ಬ ಆಚರಣೆ ಮಾಡುತ್ತಿರುವ ಭಾರತೀಯರಿಗೆ, ಭಾರತದಲ್ಲಿ ಆಚರಣೆ ಮಾಡುತ್ತಿರುವವರಿಗೆ ಹಾಗೂ ಜಗತ್ತಿನೆಲ್ಲೆಡೆ ಗಣೇಶನ ಹಬ್ಬ ಆಚರಿಸುತ್ತಿರುವ ಭಾರತೀಯರಿಗೆ ಜೋ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಭಾರತ, ಯುಎಸ್ ಹಾಗೂ ಜಗತ್ತಿನಾದ್ಯಂತ ಹಿಂದು ಹಬ್ಬ ಗಣೇಶ ಚೌತಿ ಆಚರಿಸುತ್ತಿರುವ ಎಲ್ಲರಿಗೂ ಶುಭಾಶಯಗಳು. ಈ ಹಬ್ಬ ನಿಮ್ಮೆಲ್ಲರಿಗೂ ಹೊಸ ಪ್ರಾರಂಭವಾಗಲಿ. ನಿಮಗೆ ಎದುರಾಗಿರುವ ವಿಘ್ನಗಳೆಲ್ಲ ದೂರವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
77ವರ್ಷದ ಜೋ ಬಿಡೆನ್ ಅವರು ಡೆಮೊಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. (ಏಜೆನ್ಸೀಸ್)