ಗಣಿತಶಾಸ್ತ್ರ ವಿಜ್ಞಾನದ ಅವಿಭಾಜ್ಯ ಅಂಗ

27 ckm 4
ಚಿಕ್ಕಮಗಳೂರಿನ ಎಐಟಿ ಗಣಿತಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಒಂದು ದಿನದ ಜಿಯೋಜೀಬ್ರಾ ಓಪನ್ ಸಾಫ್ಟ್‌ವೇರ್ ಕಾರ್ಯಾಗಾರವನ್ನು ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಸಿ.ಕೆ.ಸುಬ್ಬರಾಯ ಉದ್ಘಾಟಿಸಿದರು. ಡಾ. ಸಿ.ಟಿ.ಜಯದೇವ, ಡಾ. ರಮಾನಂದ, ಎಲ್.ಅನಿತಾ ಇತರರಿದ್ದರು.
Published on

ಚಿಕ್ಕಮಗಳೂರು: ಪ್ರಕೃತಿಯು ವಿಜ್ಞಾನದ ಎಲ್ಲ ವಿಭಾಗಗಳಿಗೂ ಮಾತೃ ಸಮಾನ. ಆದರೆ ಗಣಿತಶಾಸ್ತ್ರ ವಿಜ್ಞಾನದ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳು ಬೇಸರವಾದಾಗ ಗಣಿತಶಾಸ್ತ್ರದ ಮೊರೆ ಹೋಗಿ ಎರಡು ಸಮಸ್ಯೆಗಳನ್ನು ಬಿಡಿಸಿದರೂ ಸಾಕು ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಸಿ.ಕೆ.ಸುಬ್ಬರಾಯ ಅಭಿಪ್ರಾಯಪಟ್ಟರು.

ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಒಂದು ದಿನದ ಜಿಯೋಜೀಬ್ರಾ ಓಪನ್ ಸಾಫ್ಟ್‌ವೇರ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶ್ರೀನಿವಾಸ ರಾಮಾನುಜನ್ ಭಾರತದ ಅಗ್ರಗಣ್ಯ ಗಣಿತ ತಜ್ಞ. ಅವರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು.
ಎಐಟಿ ಪ್ರಾಚಾರ್ಯ ಡಾ. ಸಿ.ಟಿ.ಜಯದೇವ ಮಾತನಾಡಿ, ಪುರಾತನ ಕಾಲದಲ್ಲೇ ಋಷಿಮುನಿಗಳು ಗಣಿತಶಾಸ್ತ್ರಕ್ಕಾಗಿ ಹಲವು ಸಿದ್ಧಾಂತಗಳನ್ನು ರಚಿಸಿದ್ದರು. ಗಣಿತಶಾಸ್ತ್ರ ನಮ್ಮ ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಹಿಂಜರಿಯಬಾರದು. ಮಾನಸಿಕ, ಕಲಿಕಾ ಸಾಮರ್ಥ್ಯಗಳನ್ನು ಕರಗತ ಮಾಡಿಕೊಂಡು ನಿಜಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಡೀನ್ ಡಾ. ರಮಾನಂದ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಅವರಂತೆ ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಂದೆ ಬರಬೇಕು. ಮೊದಲು ರಾಷ್ಟ್ರ ಸೇವೆ, ನಂತರ ಸಮಾಜ ಸೇವೆ, ನಂತರ ಸಂಸಾರ, ನಂತರ ನಾನು ಎಂಬಂತೆ ಸೇವೆ ಮಾಡಬೇಕು ಎಂದರು.
ಗಣಿತಶಾಶ್ತ್ರ ವಿಭಾಗದ ಪ್ರಾಧ್ಯಾಪಕಿ ಎಲ್.ಅನಿತಾ, ಡಾ. ಎ.ಎಸ್.ಶ್ರೀಕಾಂತ್, ಡಾ. ಎಚ್.ಬಿ.ಮಲ್ಲಿಕಾರ್ಜುನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net