

ಸೊರಬ: ಮಲೆನಾಡಿನ ಮಠಗಳು ಪರಂಪರೆಯಿಂದ ಕೂಡಿದ್ದು. ಆತ್ಮ ಸಾಧನೆಯ ಜತೆಗೆ ಆತ್ಮಜ್ಞಾನ ಪ್ರಸರಣದ ಕೇಂದ್ರವಾಗಿವೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೇಮಾಗಡಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿವಶರಣರ ನಾಡೆಞಖ್ಟ್ಠಿಂದೇ ಪ್ರಖ್ಯಾತಿ ಹೊಂದಿರುವ ಮಲೆನಾಡು ಗುರುಪರಂಪರೆ ಮೂಲಕ ಈ ಭಾಗದ ಮಠಗಳು ಬೆಳೆದು ಬಂದಿವೆ. ಈ ನಿಟ್ಟಿನಲ್ಲಿ ಹಿರೇಮಾಗಡಿ ವಿರಕ್ತಮಠವು ಕೂಡ ಬೆಳೆದು ಬಂದಿದೆ. ಶಿವಮೂರ್ತಿ ಸ್ವಾಮೀಜಿ ಮಲೆನಾಡಿನ ಭಾಗದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರವನ್ನು ಗುರು ಪರಂಪರೆಯಲ್ಲಿ ಬೆಳೆಸಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮಠದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿ ರಾಜ್ಯದ ಮೂಲೆ ಮೂಲೆಗೆ ಕೀರ್ತಿ ಹರಡುವಂತೆ ಮಾಡಿದ್ದಾರೆ. ಎಲ್ಲ ಸಮಾಜದ ಜನತೆಗೆ ಒಳಿತನ್ನು ಮಾಡಿ ಆಪಾರ ಭಕ್ತರನ್ನು ಗಳಿಸಿದ್ದಾರೆ ಎಂದು ಬಣ್ಣಿಸಿದರು.
ಮುಂದೆ ಚರ ಪಟ್ಟಾಧಿಕಾರ ಹೊಂದುವಂತಹ ಶಿವಯೋಗಿ ದೇವರು ಇಲ್ಲಿಯ ಗುರುಗಳ ಪರಂಪರೆ ಮುಂದುವರಿಸಿಕೊಂಡು ಮಠವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು. ಶರಣರ ನುಡಿಯಂತೆ ಮಠಾಧೀಶರು ಸಮಾಜದ ಒಳಿತಿಗಾಗಿ, ಭಕ್ತರಲ್ಲಿ ಧಾರ್ಮಿಕ ವಿಚಾರಗಳನ್ನು ಬಿತ್ತಬೇಕು. ಈ ಮೂಲಕ ಸಮಾಜಕ್ಕೆ ಭರವಸೆ ಕೊಡುವ ರೀತಿ ಮಠಾಧೀಶರು ನಡೆದುಕೊಂಡಾಗ ಸಮಾನತೆಯ ತತ್ವ ಸಾರಲು ಸಾಧ್ಯ ಎಂದರು.
ಸಾಮೂಹಿಕ ಕಲ್ಯಾಣೋತ್ಸವದಲ್ಲಿ ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಳಗ್ಗೆ ಶ್ರೀ ಮಠದಲ್ಲಿ ವಟುಗಳಿಗೆ ತೊಗರ್ಸಿ ಮಳೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಅವರಿಂದ ದೀಕ್ಷಾ ಆಯಾಚಾರ ನಡೆಯಿತು.
ಹಿರೇಮಾಗಡಿ ಶ್ರೀ ಶಿವಮೂರ್ತಿ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ಬಿಳಕಿ ಹಿರೇಮಠದ ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ಕಂಪ್ಲಿ ಕಲ್ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಶಾಂತಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬಮ್ಮನಹಳ್ಳಿ ಗುರುಪಾದೇಶ್ವರ ಮಠದ ಶಿವಯೋಗೀಶ್ವರ ಸ್ವಾಮೀಜಿ, ಕಣಸೋಗಿ ಹೊಂಡದ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.