ಯುಎಇನಲ್ಲಿರುವ ಅಜ್ಮಾನ್ ಮಾರ್ಕೆಟ್​ನಲ್ಲಿ ಭಾರಿ ಬೆಂಕಿ ಅನಾಹುತ

dubai-ajman-market-fire
Published on

ಅಜ್ಮಾನ್​: ಯುನೈಟೆಡ್ ಅರಬ್ ಎಮಿರೇಟ್ಸ್​ನ ಅಜ್ಮಾನ್​ ಮಾರ್ಕೆಟ್​ನಲ್ಲಿ ನಿನ್ನೆ ಮುಸ್ಸಂಜೆ ವೇಳೆ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಲೆಬನಾನ್​ನ ಬೈರುತ್​ನ ಭಾರಿ ಸ್ಫೋಟದ ಬೆನ್ನಿಗೆ ನಡೆದ ಮತ್ತೊಂದು ಅಗ್ನಿ ಅವಘಡ ಇದಾಗಿದೆ. ಸಾವು-ನೋವು, ನಾಶ-ನಷ್ಟಗಳ ಅಂದಾಜು ಇನ್ನೂ ಇಲ್ಲ.

ಖಲೀಜ್ ಟೈಮ್ಸ್ ವರದಿ ಪ್ರಕಾರ, ಅಜ್ಮಾನ್​ ಮಾರ್ಕೆಟ್​ನ ನ್ಯೂ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ರುಟ್ಸ್ ಆ್ಯಂಡ್ ವೆಜಿಟೇಬಲ್ ಮಾರುಕಟ್ಟೆಯಲ್ಲಿ ಈ ದುರಂತ ಸಂಭವಿಸಿದೆ. ಅಗ್ನಿಶಾಮಕ ಸೇವೆ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ರಕ್ಷಣಾ ಕಾರ್ಯವೂ ನಡೆಯುತ್ತಿದೆ.

ಮಾರುಕಟ್ಟೆಯ ಒಂದು ಭಾಗವನ್ನು ಕರೊನಾ ವೈರಸ್ ಸೋಂಕಿನ ಕಾರಣಕ್ಕೆ ನಾಲ್ಕು ತಿಂಗಳಿಂದ ಮುಚ್ಚಲಾಗಿತ್ತು. ಅವೆಲ್ಲವೂ ಈಗ ನಾಶವಾಗಿದ್ದು, ಕೆಲವು ಭಾಗವೆಲ್ಲ ಸುಟ್ಟು ಹೋಗಿವೆ. ಒಮ್ಮೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಕೂಡಲೇ ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಶೇಖ್ ಸುಲ್ತಾನ್ ಬಿನ್ ಅಬ್ದುಲ್ಲಾಹ್​ ಅಲ್ ನುಇಯಾಮಿ ತಿಳಿಸಿದ್ದಾಗಿ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಡಬ್ಲ್ಯುಎಎಂ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net