

ಅಹಮದಾಬಾದ್: ನವರಂಗಪುರದ ಶ್ರೇಯ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, 8 ರೋಗಿಗಳು ಸಜೀವ ದಹನವಾಗಿದ್ದಾರೆ. ಅಗ್ನಿ ಅನಾಹುತ ಸಂಭವಿಸುತ್ತಲೇ ಆಸ್ಪತ್ರೆಯಲ್ಲಿದ್ದ 35 ರೋಗಿಗಳನ್ನು ಸ್ಥಳಾಂತರಿಸುವಲ್ಲಿ ಆಡಳಿತ ಮಂಡಳಿ ಯಶಸ್ವಿಯಾಗಿದೆ.
ಶ್ರೇಯ್ ಆಸ್ಪತ್ರೆಯ ಇಂಟೆನ್ಸಿವ್ ಕೇರ್ ಯೂನಿಟ್(ಐಸಿಯು) ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಕೂಡಲೇ ರಕ್ಷಣಾ ಕಾರ್ಯ ಶುರುಮಾಡಲಾಗಿತ್ತು. ಆದಾಗ್ಯೂ, ಎಂಟು ರೋಗಿಗಳು ಪ್ರಾಣ ಕಳೆದುಕೊಂಡರು. ಶ್ರೇಯ್ ಆಸ್ಪತ್ರೆಯನ್ನು ಕೋವಿಡ್ 19 ಚಿಕಿತ್ಸಾ ಕೇಂದ್ರವಾಗಿ ಮಾರ್ಪಡಿಸಲಾಗಿತ್ತು.
ಇದನ್ನೂ ಓದಿ: ವಿದೇಶಿ ಮಾಧ್ಯಮಗಳಲ್ಲಿ ಅಯೋಧ್ಯೆ
ಬೆಂಕಿ ಅವಘಡ ಯಾಕಾಯಿತು ಎಂಬ ಬಗ್ಗೆ ತನಿಖೆ ಆರಂಭವಾಗಿದ್ದು, ಸದ್ಯ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. (ಏಜೆನ್ಸೀಸ್)