

ನವದೆಹಲಿ: ಕೃಷಿಕರು ಹಾಗೂ ಅಲೆಮಾರಿ ಸಮುದಾಯದವರ ನಡುವೆ ಭೀಕರ ಗುಂಡಿನ ಚಕಮಕಿಯಲ್ಲಿ 50 ಮಂದಿ ಮೃತಪಟ್ಟಿರುವ ಘಟನೆ ನೈಜೀರಿಯಾದ ಉತ್ತರ ಕೇಂದ್ರ ಭಾಗದಲ್ಲಿ ನಡೆದಿದೆ.
ಹಿಂಸಾಚಾರದ ಬೆನ್ನಲ್ಲೇ ಸ್ಥಳೀಯಾಡಳಿತವು ಪ್ರದೇಶದ ಸುತ್ತಮುತ್ತ ಕರ್ಫ್ಯೂ ಹೇರಿದ್ದು, ಹಿಂಸಾಚಾರವನ್ನು ನಿಲ್ಲಿಸುವಂತೆ ವಿನಂತಿಸಿದೆ. ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ನೈಜೀರಿಯಾದ ಉತ್ತರ ಭಾಗದಲ್ಲಿರುವ ಮಾಂಗು ಜಿಲ್ಲೆಯಲ್ಲಿರುವ ಕೆಲ ಗ್ರಾಮಗಳಿಗೆ ನುಗ್ಗಿದ ಸಶಸ್ತ್ರಧಾರಿಗಳು ಗುಂಡಿನ ದಾಳಿ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ಧಾರೆ. ದುರ್ಘಟನೆಯಲ್ಲಿ ಹಲವರು ಸಜೀವ ದಹನವಾಗಿದ್ದು, ಅನೇಕರ ಮೃತದೇಹಗಳು ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ನೈಜೀರಿಯಾದಲ್ಲಿ ಭದ್ರತಾ ವ್ಯವಸ್ಥೆ ಸುಧಾರಿಸುವುದಾಗಿ ಟಿನುಬು ಚುನಾವಣೆ ವೇಳೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.