More

    ಕ್ರಿಕೆಟ್​ ಆಡಿದ ಮರುಕ್ಷಣವೇ ಕುಸಿದು ಬಿದ್ದು ಯುವಕ ಸಾವು; ವೈದ್ಯರು ಹೇಳಿದ್ದಿಷ್ಟು

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಬಾಧಿಸುತ್ತಿದ್ದು, ಇದೀಗ ಯುವಕನೋರ್ವ ಕ್ರಿಕೆಟ್​ ಆಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿ ಆಗಿರುವ ಘಟನೆ ಬೆಂಗಳೂರು ನಗರದ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ತಮಿಳುನಾಡು ತಿರುವಣಾಮಲೈ ಮೂಲದ ರಾಬಿನ್ (22) ಎಂದು ತಿಳಿದು ಬಂದಿದ್ದು, ಇವರು ರಾಜಾಜಿನಗರದ ಬೋವಿ ಕಾಲೋನಿ (ಬಸವೇಶ್ವರನಗರ) ನಿವಾಸಿ ಎಂದು ತಿಳಿದು ಬಂದಿದೆ. ಇವರು ರಾಷ್ಟ್ರೀಕೃತ ಬ್ಯಾಂಕಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

    ನಡೆದಿದ್ದಿಷ್ಟು: ಗಣರಾಜ್ಯೋತ್ಸವದ ಪ್ರಯುಕ್ತ ಇಂದು ಬ್ಯಾಂಕಿನ ವತಿಯಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ರಾಬಿನ್​ ಎರಡು ಮೂರು ಆಟಗಳಲ್ಲಿ ಜಯಗಳಿಸಿ ಕ್ರಿಕಟ್​ನಲ್ಲೂ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    Robin

    ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್​ ವೇಳೆ ಭದ್ರತಾ ಲೋಪ; ಸಿಎಂ ಬಳಿ ಏಕಾಏಕಿ ನುಗ್ಗಲು ಯತ್ನಿಸಿದ ವ್ಯಕ್ತಿ

    ಬಹುಮಾನ ವಿತರಣೆ ವೇಳೆ ವೇದಿಕೆ ಮೇಲೆ ರಾಬಿನ್ ಕುಸಿದು ಬಿದ್ದಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಡಿಹೈಡ್ರೇಟ್​ ಆಗಿದ್ದರಿಂದ ರಾಬಿನ್​ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

    ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts