ನಿಗಮ ಮಂಡಳಿ ಅಧ್ಯಕ್ಷರನ್ನು ನೇಮಿಸಿದ ಸರ್ಕಾರ; 34 ಶಾಸಕರಿಗೆ ಅವಕಾಶ

Congress
Published on

ಬೆಂಗಳೂರು: ಕಳೆದ ಕೆಲ ದಿನಗಳಿಂದ ಕಾಂಗ್ರೆಸ್​ ಸರ್ಕಾರಕ್ಕೆ ಗೊಂದಲದ ಗೂಡಾಗಿ ಪರಿಣಮಿಸಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಪಟ್ಟಿ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಿದೆ. 34 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ.

ಬಿಡುಗಡೆ ಮಾಡಲಾಗಿರುವ ಪಟ್ಟಿಯಲ್ಲಿ ನಮೂದಿಸಲಾಗಿರುವ ಶಾಸಕರನ್ನು ನಿಗಮ/ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಆದೇಶ ಹೊರಡಿಸಿದ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ನೇಮಿಸಿ ಆದೇಶಿಸಲಾಗಿದೆ.

ನೇಮಕಗೊಂಡ ಶಾಸಕರ ಹೆಸರು ಇಂತಿದೆ:

ರಾಜು ಕಾಗೆ: ಹುಬ್ಬಳ್ಳಿ ಸಾರಿಗೆ ನಿಗಮ (ವಾಯವ್ಯ ಸಾರಿಗೆ ನಿಗಮ)

ಹೆಚ್.ವೈ.ಮೇಟಿ: ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ

ಎಸ್.ಆರ್.ಶ್ರೀನಿವಾಸ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಬಸವರಾಜ ನೀಲಪ್ಪ ಶಿವಣ್ಣನವರ್: ಅರಣ್ಯ ಅಭಿವೃದ್ಧಿ ನಿಗಮ

ಬಿ.ಜಿ.ಗೋವಿಂದಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಹೆಚ್.ಸಿ.ಬಾಲಕೃಷ್ಣ: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ

ಜಿ.ಎಸ್.ಪಾಟೀಲ್: ಖನಿಜ ಅಭಿವೃದ್ಧಿ ನಿಗಮ ನಿಯಮಿತ

ಎನ್.ಎ.ಹ್ಯಾರಿಸ್: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಕೌಜಲಗಿ ಮಹಾಂತೇಶ್ ಶಿವಾನಂದ: ಹಣಕಾಸು ಸಂಸ್ಥೆ

ಸಿ.ಪುಟ್ಟರಂಗಶೆಟ್ಟಿ: ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್

ಬೀಳಗಿ ಶಾಸಕ ಜೆ.ಟಿ.ಪಾಟೀಲ್: ಹಟ್ಟಿ ಚಿನ್ನದ ಗಣಿ

ರಾಜಾ ವೆಂಕಟಪ್ಪ ನಾಯಕ: ಕರ್ನಾಟಕ ರಾಜ್ಯ ಉಗ್ರಾಣ ನಿಗಮ

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ: ಲ್ಯಾಂಡ್ ಆರ್ಮಿ

ಕೆ.ಎಂ.ಶಿವಲಿಂಗೇಗೌಡ: ಕರ್ನಾಟಕ ಗೃಹ ಮಂಡಳಿ

ಅಬ್ಬಯ್ಯ ಪ್ರಸಾದ್: ಕರ್ನಾಟಕ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿ

ಬೇಳೂರು ಗೋಪಾಲಕೃಷ್ಣ: ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ

ಎಸ್.ಎನ್.ನಾರಾಯಣಸ್ವಾಮಿ: ಕೆಯುಡಿಐಸಿ ಮತ್ತು ಎಫ್​ಸಿ

ಪಿ.ಎಂ.ನರೇಂದ್ರಸ್ವಾಮಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಟಿ.ರಘುಮೂರ್ತಿ: ಕರ್ನಾಟಕ ರಾಜ್ಯ ಕೈಗಾರಿಕೆಗಳ ಮಂಡಳಿ

ರಮೇಶ್ ಬಾಬು ಬಂಡಿಸಿದ್ದೇಗೌಡ: ಚೆಸ್ಕಾಂ

ಬಿ.ಶಿವಣ್ಣ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಎಸ್.ಎನ್.ಸುಬ್ಬಾರೆಡ್ಡಿ: ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ

ವಿನಯ ಕುಲಕರ್ಣಿ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಅನಿಲ್ ಚಿಕ್ಕಮಾದು: ಜಂಗಲ್ ಲಾಡ್ಜಸ್

ಬಸನಗೌಡ ದದ್ದಲ್: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ

ಖನೀಜ್ ಫಾತಿಮಾ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ

ವಿಜಯಾನಂದ ಕಾಶಪ್ಪನರ್: ಕರ್ನಾಟಕ ಕ್ರೀಡಾ ಪ್ರಾಧಿಕಾರ

ಶ್ರೀನಿವಾಸ ಮಾನೆ: ಡಿಸಿಎಂ ರಾಜಕೀಯ ಸಲಹೆಗಾರ

ಟಿ.ಡಿ.ರಾಜೇಗೌಡ: ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ

ಎಂ.ರೂಪಕಲಾ: ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ

ಸತೀಶ್​ ಸೈಲ್: ಕರ್ನಾಟಕ ಮಾರ್ಕೇಟಿಂಗ್​ ಕನ್ಸಲ್ಟೆಂಟ್​ ಅಂಡ್​ ಏಜೆನ್ಸಿಸ್​

ಶರತ್​ ಬಚ್ಚೇಗೌಡ: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ

ಜಿ.ಎಂ. ಗಣೇಶ್​: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ

ಬಸವನಗೌಡ ತುರುವಿಹಾಳ: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net