ಗಾಂಜಾ ಕೆಟ್ಟದ್ದಲ್ಲ ಅದನ್ನು ಕಾನೂನುಬದ್ಧ ಮಾಡಿ; ನಟ ರಾಕೇಶ್ ಅಡಿಗ

jpg
Published on

ಡ್ರಗ್ಸ್ ಕೆಟ್ಟದ್ದು, ಗಾಂಜಾವನ್ನು ಕಾನೂನುಬದ್ಧ ಮಾಡಿಬಿಡಿ ಎಂದು ಸ್ಯಾಂಡಲ್ವುಡ್​ ನಟ ಜೋಷ್​ ಖ್ಯಾತಿಯ ರಾಕೇಶ್​ ಅಡಿಗ ಹೇಳಿದ್ದಾರೆ. ನಿನ್ನೆಯಷ್ಟೇ ನಟಿ ನಿವೇದಿತಾ ಸಹ ಗಾಂಜಾ ತುಳಸಿಯೆಷ್ಟೇ ಪವಿತ್ರ ಎಂದಿದ್ದರು. ಇದೀಗ ರಾಕೇಶ್​ ಅಡಿಗ ಸಹ ಗಾಂಜಾ ಮಾರಾಟಕ್ಕೆ ಅನುವು ಮಾಡಿಕೊಡಿ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ ಗಾಂಜಾವನ್ನು ಕಾನೂನುಬದ್ಧ ಮಾಡುವುದಕ್ಕೆ ನನ್ನ ಸಹಮತವಿದು. ಸಾಕಷ್ಟು ಸುಶಿಕ್ಷಿತರು, ವೈದ್ಯರು ಲೀಗಲೈಸ್​ ಮಾಡುವ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಗಾಂಜಾದಿಂದ ಆಗುವ ಅನುಕೂಲಗಳನ್ನು ಪಟ್ಟಿಮಾಡಿದ್ದಾರೆ. ಆದರೆ ಡ್ರಗ್ಸ್​ ವಿಚಾರ ಬಂದಾಗ ಗಾಂಜಾವನ್ನೂ ಎಳೆದು ತರಲಾಗುತ್ತಿದೆ. ಅದೇ ಬೇರೆ ಇದೇ ಬೇರೆ. ಡ್ರಗ್ಸ್​ಗೂ ಗಾಂಜಾಕ್ಕೂ ತುಂಬ ವ್ಯತ್ಯಾಸವಿದೆ. ಎರಡನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡಬೇಡಿ ಎಂದಿದ್ದಾರೆ.

ಇನ್ನು ಗಾಂಜಾದಿಂದಾಗುವ ಅನುಕೂಲತೆಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈಗಾಗಲೇ ಈ ವಿಚಾರ ಹೈಕೋರ್ಟ್ ನಲ್ಲಿರುವುದರಿಂದ ಅಲ್ಲಿಂದಲೂ ತೀರ್ಪು ಪ್ರಕಟವಾಗಲಿದೆ. ನೂರಾರು ರೋಗಗಳಿಗೆ ಗಾಂಜಾ ಪರಿಣಾಮಕಾರಿಯಾಗಿದೆ. ಹಾಗಂತ ನಶೆಗೋಸ್ಕರ ಅದನ್ನು ಸೇದುವುದು ತಪ್ಪು. ಪ್ರಾಣಾಯಾಮದಿಂದಲೇ ನಾವು ನಶೆಯನ್ನು ಪಡೆದುಕೊಳ್ಳಬಹುದು’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net