ಅಮೃತಬಿಂದು

Sudina-7-Amrutabindu
Published on

ಗುರೋಃ ಶಿವಸ್ಯ ಭಕ್ತಾನಾಂ ನಿಂದಾನsಕರ್ಣನಂ ಹಿ ಯತ್ | ತಚ್ಚತುರ್ವಿಂಶಕಂ ಪ್ರೋಕ್ತಂ ಕಾಯಿಕಂ ತು ತತಃ ಶೃಣು ||

ಗುರು, ಶಿವ ಮತ್ತು ಶಿವಭಕ್ತರ ನಿಂದೆಯನ್ನು ಎಂದೂ ಕೇಳದಿರುವುದು ಇಪ್ಪತ್ನಾಲ್ಕನೆಯ ಶೀಲ.

ಗುರು ಮುಂತಾದವರ ನಿಂದೆಯನ್ನು ಕೇಳದಿರುವುದನ್ನೇ ವೀರಶೈವ ಸಿದ್ಧಾಂತದಲ್ಲಿ ಗಣಾಚಾರ ಎನ್ನಲಾಗುತ್ತದೆ.

ಇದರಲ್ಲಿ ನಿಂದಾವಿರೋಧ ಮತ್ತು ಸ್ಥಾನ ಪರಿತ್ಯಾಗ ಎಂದು ಎರಡು ಪ್ರಕಾರ. ಶಕ್ತಿಯಿದ್ದರೆ ನಿಂದಿಸುವವನಿಗೆ

ಸರಿಯಾಗಿ ಬೈದು ಇಲ್ಲವೆ ಶಿಕ್ಷೆ ಕೊಟ್ಟು ಆ ನಿಂದೆ ನಿಲ್ಲುವಂತೆ ಮಾಡುವುದು ನಿಂದಾವಿರೋಧ. ನಿಂದಕನಿಗೆ

ಶಿಕ್ಷೆ ಕೊಡಲು ಶಕ್ತಿ ಇಲ್ಲದಿದ್ದರೆ ಆ ಸ್ಥಳವನ್ನೇ ಬಿಟ್ಟು ಬೇರೆಡೆ ಹೋಗುವುದು ಸ್ಥಾನ ಪರಿತ್ಯಾಗ. ಒಟ್ಟಿನಲ್ಲಿ ನಿಂದೆ ಕಿವಿಗೆ ಬೀಳಬಾರದು.

| ಚಂದ್ರಜ್ಞಾನಾಗಮ (9.81 ) / ವ್ಯಾಖ್ಯಾನ: ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net