ಮಾವೋವಾದಿಗಳಿಂದ ಕತ್ತು ಹಿಸುಕಿ ಬಿಜೆಪಿ ಮುಖಂಡನ ಹತ್ಯೆ; ತನಿಖೆ ಆರಂಭಿಸಿದ ಪೊಲೀಸರು ತಿಳಿಸಿದಿಷ್ಟು.. | Chhattisgarh

Untitled design - 2024-12-11T160227.163
Published on

ರಾಯಪುರ : ಛತ್ತೀಸ್‌ಗಢದ(Chhattisgarh) ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಮಂಗಳವಾರ(ಡಿಸೆಂಬರ್​​ 10) ರಾತ್ರಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕನನ್ನು ಪೊಲೀಸ್ ಮಾಹಿತಿದಾರ ಎಂಬ ಆರೋಪದ ಮೇಲೆ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ(ಡಿಸೆಂಬರ್​ 11) ಹೇಳಿದ್ದಾರೆ. ಜಿಲ್ಲೆಯ ಫರ್ಸೆಗಢ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಬಿಜಾಪುರ ಪೊಲೀಸರು ತಿಳಿಸಿದರು.

ಈ ಘಟನೆಯೊಂದಿಗೆ ಈ ವರ್ಷ ಬಸ್ತಾರ್ ವಿಭಾಗದ ವಿವಿಧ ಸ್ಥಳಗಳಲ್ಲಿ ಮಾವೋವಾದಿಗಳ ಹಿಂಸಾಚಾರದಲ್ಲಿ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಮಹೇಶ್ತನ್ನ ವಿರುದ್ಧದ ಟೀಕೆಗಳನ್ನು ತೆಗೆದುಹಾಕಿ; ಸ್ಪೀಕರ್ ಓಂ ಬಿರ್ಲಾರ ಬಳಿ ರಾಹುಲ್​ ಗಾಂಧಿ ಮನವಿ | Rahul Gandhi  ಗಗ್ಡಾ ಹೇಳಿದ್ದಾರೆ.

ಮಾವೋವಾದಿಗಳು 35 ವರ್ಷದ ಕುಡಿಯಮ್ ಮಾಡೋನನ್ನು ಆತನ ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಕತ್ತು ಹಿಸುಕಿ ಕೊಂದಿದ್ದಾರೆ. ಮಾಡೋ ಭಾರತೀಯ ಜನತಾ ಕಿಸಾನ್ ಮೋರ್ಚಾ (ಬಿಜೆಪಿಯ ರೈತ ವಿಭಾಗ) ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಸ್ಥಳದಲ್ಲಿ ನಕ್ಸಲೀಯರು ಬಿಟ್ಟು ಹೋಗಿರುವ ಕರಪತ್ರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಪೊಲೀಸ್ ಇನ್‌ಫಾರ್ಮರ್ ಎಂದು ಆರೋಪಿಸಿ ಕೊಲೆ ಮಾಡಿರೋದಾಗಿ ಬರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.

2023 ಮತ್ತು ಏಪ್ರಿಲ್ 2024ರ ನಡುವೆ 9 ಬಿಜೆಪಿ ನಾಯಕರ ಹತ್ಯೆ

ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಏಕೆಂದರೆ ಬಸ್ತಾರ್‌ನಲ್ಲಿ ಹತ್ಯೆಯಾದ ಬಹುತೇಕ ಬಿಜೆಪಿ ನಾಯಕರು ಬಿಜಾಪುರದವರಾಗಿದ್ದಾರೆ ಎಂದು ಸ್ಥಳೀಯ ಬಿಜೆಪಿ ನಾಯಕ ಮಹೇಶ್ ಗಗ್ಡಾ ಹೇಳಿದರು. ಈ ಘಟನೆಯೊಂದಿಗೆ ಈ ವರ್ಷ ಇಲ್ಲಿಯವರೆಗೆ ಬಸ್ತಾರ್ ವಿಭಾಗದ ವಿವಿಧ ಸ್ಥಳಗಳಲ್ಲಿ ಮಾವೋವಾದಿ ಹಿಂಸಾಚಾರದಲ್ಲಿ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಜನವರಿ 2023 ರಿಂದ ಏಪ್ರಿಲ್ 2024ರ ನಡುವೆ, ಈ ವಿಭಾಗದಲ್ಲಿ ಒಂಬತ್ತು ಬಿಜೆಪಿ ನಾಯಕರು ವಿವಿಧ ಘಟನೆಗಳಲ್ಲಿ ಹತ್ಯೆಯಾಗಿದ್ದಾರೆ ಎಂಬುದು ಗಮನಾರ್ಹ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net