ಸೀಹಳ್ಳಿ ಗ್ರಾಮದಲ್ಲಿ ಮಂತ್ರಾಕ್ಷತೆ ವಿತರಣೆ

21BANNU1
Published on

ಬನ್ನೂರು: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪಟ್ಟಣ ಸಮೀಪದ ಸೀಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಮಂತ್ರಾಕ್ಷತೆ ವಿತರಿಸಲಾಯಿತು.


ರೈತ ಮುಖಂಡ ಸೀಹಳ್ಳಿ ರವಿ ಮಾತನಾಡಿ, ಅಯೋಧ್ಯೆಯಿಂದ ತರಲಾದ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಶ್ರೀರಾಮನ ಪೂಜೆಯಲ್ಲಿ ಎಲ್ಲರೂ ಪಾಲ್ಗೊಂಡು ಪುನೀತರಾಗೋಣ. ಹಲವಾರು ವರ್ಷಗಳ ಪ್ರತಿಫಲವಾಗಿ ರಾಮಮಂದಿರ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಮಂಜು, ಮಧು, ಮರಯ್ಯಚಾರಿ, ಕಲ್ಯಾಣ್, ದೇವರಾಜು, ಸಿದ್ದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net