ಮನ್ಸೂಕ್ ಹಿರೇನ್ ಕೊಲೆ ಪ್ರಕರಣವನ್ನು ಬಗೆಹರಿಸಿದ್ದೇವೆ ಎಂದ ಮುಂಬೈ ಪೊಲೀಸ್: ಸಂಚು ಮಾಡಿದ್ದು ಸಚಿನ್​ ವಾಜೆ?

mukesh
mukesh ambani
Published on

ಮುಂಬೈ: ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮುಂಬೈನ ವ್ಯಾಪಾರಿ ಮನ್ಸೂಕ್ ಹಿರೇನ್ ಕೊಲೆ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಡಿಐಜಿ ಶಿವದೀಪ್ ಲಂಡೆ ಅವರು ಹೇಳಿದ್ದಾರೆ.

ಈ ವಿಷಯವನ್ನು ತಮ್ಮ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಸೂಕ್ಷ್ಮ ಪ್ರಕಣವಾಗಿದ್ದ ಮನ್ಸೂಕ್ ಹಿರೇನ್ ಕೊಲೆ ಪ್ರಕರಣವನ್ನು ಬಗೆಹರಿಸಲಾಗಿದ್ದು, ಇದಕ್ಕಾಗಿ ನಮ್ಮ ತನಿಖಾಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ. ಈ ಪ್ರಕರಣ ನನ್ನ ಸೇವಾವಧಿಯಲ್ಲಿ ವಿಶಿಷ್ಠವಾದದ್ದು ಎಂದು ಹೇಳಿದ್ದಾರೆ.

ಫೆಬ್ರವರಿ 25 ರಂದು ಸ್ಕಾರ್ಪಿಯೋ ವಾಹನ ಒಂದು ಸ್ಪೋಟಕ ಹಾಗೂ ಬೆದರಿಕೆ ಪತ್ರ ಒಳಗೊಂಡು ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಾದ ಅಂಟಿಲಿಯಾ ಬಳಿ ಪತ್ತೆಯಾಗಿತ್ತು. ಪತ್ತೆಯಾದ ಸ್ಕಾರ್ಪಿಯೋ ವಾಹನ ತನ್ನದು ಎಂದು ಹೇಳಿಕೊಂಡು ಮನ್ಸೂಕ್ ಹಿರೇನ್ ಎನ್ನುವ ವ್ಯಕ್ತಿ ಪೊಲೀಸ್​ ಮುಂದೆ ಹೊರಟಿದ್ದರು. ಆದರೆ ಮಾರ್ಚ್ 5 ರಂದು ಮನ್ಸೂಕ್ ಹಿರೇನ್ ಏಕಾಏಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಎನ್​ಕೌಂಟ್​ರ್ ಪರಿಣಿತಿಯ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎಟಿಎಸ್ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net