More

    ಪಶ್ಚಿಮ ಬಂಗಾಳ ಚುನಾವಣೆ: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ, ಏನು ಪ್ರಮುಖ ಭರವಸೆಗಳು?

    ಕಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ‘ಬಂಗಾರದ ಬಂಗಾಳ’ ಮಾಡುತ್ತೇವೆ ಎಂದು ಅದು ಹೇಳಿದೆ.

    ಕಲ್ಕತ್ತದಲ್ಲಿ ನಡೆದ ಸಮಾರಂಭದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, ಇದು ಕೇವಲ ಪ್ರಣಾಳಿಕೆ ಅಲ್ಲ. ಬಂಗಾಳದ ಅಭಿವೃದ್ಧಿಗೆ ದೇಶದ ಅತಿದೊಡ್ಡ ಪಕ್ಷ ಕೈಗೊಂಡಿರುವ ಸಂಕಲ್ಪ ಪತ್ರ ಎಂದು ಹೇಳಿದರು.

    ಇದನ್ಣೂ ಓದಿ: VIDEO | ಪ್ರಧಾನಿ ಮೋದಿ ಭಾಷಣ ಕೇಳಲು ನೆರೆದ ಜನಸಾಗರ ನೋಡಿ!

    ಪಶ್ಚಿಮ ಬಂಗಾಳ ಸರ್ಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವುದು ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ. ನುಸುಳುಕೋರರನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಲಾಗುವುದು, ರೈತ ಸಮ್ಮಾನ್ ಕಾರ್ಯಕ್ರಮದ ಭಾಗವಾಗಿ ಪ್ರತಿ ವರ್ಷ 6 ಸಾವಿರ ರೂಪಾಯಿ ರೈತರ ಖಾತೆಗೆ, ಹಿಂದಿನ ಮೂರು ವರ್ಷದ ಅವಧಿಯಲ್ಲಿ ಟಿಎಂಸಿ ನೀಡದ 6 ಸಾವಿರ ರೂಪಾಯಿಯನ್ನು ಸೇರಿ ಮುಂದಿನ ವರ್ಷ 18 ಸಾವಿರ ರೂ ಖಾತೆಗೆ ಹಾಕಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.

    ನಿರ್ಗತಿಕ ಕುಟುಂಬಗಳಿಗೆ ವರ್ಷಕ್ಕೆ 10 ಸಾವಿರ ರೂಪಾಯಿ ನೀಡಲಾಗುವುದು, ಬಂಗಾಳಿ ಬಾಷೆಯನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯಗೊಳಿಸಲಾಗುವುದು, ಪಿಜಿ ವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿದೆ. (ಏಜೇನ್ಸಿಸ್).

    ಎಲ್ಲಿ ಯೋಜನೆ ಇದೆಯೋ ಅಲ್ಲಿ ಮಮತಾ ಬ್ಯಾನರ್ಜಿ ಹಗರಣ: ಪ್ರಧಾನಿ ಮೋದಿ ಟೀಕೆ

    ಥೂ…ನನ್ನಷ್ಟು ದೊಡ್ಡ ಕತ್ತೆ ಯಾರೂ ಇಲ್ಲ… ನಾನೇ ದೊಡ್ಡ ಕತ್ತೆ… ಎಂದು ಹಣೆ ಚಚ್ಚಿಕೊಂಡ ಮಮತಾ ಬ್ಯಾನರ್ಜಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts