

ಕಡೂರು: ಪಟ್ಟಣದ ಪುರಸಭೆಗೆ ಕಳೆದ ಒಂದೂವರೆ ವರ್ಷದಿಂದ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ರುದ್ರೇಶ್ ಹೊಸದುರ್ಗ ಪಟ್ಟಣದ ಪುರಸಭೆಗೆ ವರ್ಗಾವಣೆಗೊಂಡಿದ್ದಾರೆ. ಕಡೂರು ಪುರಸಭೆಗೆ ಚಿಕ್ಕಮಗಳೂರು ನಗರಸಭೆಯ ವ್ಯವಸ್ಥಾಪಕ ಕೆ.ಎಸ್.ಮಂಜುನಾಥ್ ಅವರನ್ನು ಮುಖ್ಯಾಧಿಕಾರಿಯಾಗಿ ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಆದೇಶಿಸಿದ್ದಾರೆ. ಮಂಗಳವಾರ ಕೆ.ಎಸ್.ಮಂಜುನಾಥ್ ಅಧಿಕಾರ ಸ್ವೀಕರಿಸಿದರು.