

ನವದೆಹಲಿ: ಸರ್ಕಾರದ ಮಾಧ್ಯಮ ಪ್ರಚಾರದ ಅಂಗವಾದ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಪ್ರಿನ್ಸಿಪಲ್ ಡೈರೆಕ್ಟರ್ ಜನರಲ್ ಆಗಿ ಮನೀಶ್ ದೇಸಾಯಿ ಅವರನ್ನು ನೇಮಕ ಮಾಡಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ವಿಚಾರವನ್ನು ಘೋಷಿಸಿದೆ.
ಪ್ರಸಕ್ತ ಪಿಐಬಿ ಡೈರೆಕ್ಟರ್ ಜನರಲ್ ಆಗಿರುವ ರಾಜೇಶ್ ಮಲ್ಹೋತ್ರಾ ಅವರ ನಿವೃತ್ತಿಯ ನಂತರ ಮನೀಶ್ ದೇಸಾಯಿ ಪಿಐಬಿ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
1989ರ ಭಾರತೀಯ ಮಾಹಿಸಿ ಸೇವಾ (ಐಐಎಸ್) ಅಧಿಕಾರಿ ಆಗಿರುವ ಮನೀಶ್ ದೇಸಾಯಿ ಕಳೆದ ವರ್ಷವಷ್ಟೇ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ಸ್ (ಸಿಬಿಸಿ) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪಿಐಬಿ ಮೂಲಕ ಇದೀಗ ಅವರಿಗೆ ಮತ್ತೊಂದು ಮಹತ್ವದ ಸ್ಥಾನ ಲಭಿಸಿದೆ.
ಈ ಹಿಂದೆ 2012ರಿಂದ 2018ರ ವರೆಗೆ ಆರು ವರ್ಷಗಳ ಕಾಲ ಅವರು ಪಿಐಬಿಯ ಅಡಿಷನಲ್ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು.