ನೆಲದಡಿಯಲ್ಲಿದೆ ಎರಡಂತಸ್ತಿನ ಮನೆ; ಇದರ ನಿರ್ಮಾಣಕ್ಕೆ ಈತ ತೆಗೆದುಕೊಂಡ ಸಮಯ 12 ವರ್ಷ

UG House F
Published on

ಉತ್ತರಪ್ರದೇಶ: ಇಲ್ಲಿ ಹನ್ನೊಂದು ಕೊಠಡಿಗಳ ವಿಶಿಷ್ಟವಾದ ಮನೆಯೊಂದಿದೆ. ಮನೆ ಎಂದರೆ ಸಾಮಾನ್ಯವಾಗಿ ನೆಲದ ಮೇಲೇ ಇರುತ್ತದೆ. ಆದರೆ ಇದು ಅವೆಲ್ಲಕ್ಕಿಂತಲೂ ಭಿನ್ನ, ಏಕೆಂದರೆ ಎರಡು ಅಂತಸ್ತಿನ ಈ ಮನೆ ನೆಲದಡಿಯಲ್ಲಿದೆ.

ಉತ್ತರಪ್ರದೇಶದ ಹರ್ದೋಯಿ ಎಂಬಲ್ಲಿ ಪಪ್ಪು ಬಾಬಾ ಎಂದೂ ಕರೆಯಲಾಗುವ ಇರ್ಫಾನ್ ಎಂಬ ವ್ಯಕ್ತಿ ಈ ಮನೆ ನಿರ್ಮಿಸಿದ್ದಾನೆ. ಅಷ್ಟಕ್ಕೂ ಈ ಮನೆ ನಿರ್ಮಿಸಲು ಅವನಿಗೆ ತಗುಲಿದ ಸಮಯದ ಬಗ್ಗೆ ಕೇಳಿದವರು ಒಮ್ಮೆ ಹುಬ್ಬೇರಿಸಿದರೂ ಅಚ್ಚರಿ ಇಲ್ಲ. ಕಾರಣ, ಇದರ ನಿರ್ಮಾಣಕ್ಕೆ ಬರೋಬ್ಬರಿ 12 ವರ್ಷಗಳು ಬೇಕಾಗಿವೆ.

ಈತನ ಪಾಲಿಗೆ ಇದು ಅರಮನೆಯೇ ಆಗಿದ್ದು, ಇದರಲ್ಲಿ 11 ಕೊಠಡಿಗಳಿವೆ. ಜತೆಗೆ ಒಂದು ಬಾಲ್ಕನಿ ಮಾತ್ರವಲ್ಲದೆ, ಬಾವಿ ಕೂಡ ಇದೆ. ಅಲ್ಲದೆ ಇದರೊಳಗೆ ಮಸೀದಿ ಕೂಡ ಇದೆ. ಅಂದಹಾಗೆ ಈತ 2011ರಲ್ಲಿ ಈ ಮನೆಯಲ್ಲಿ ಕಟ್ಟಿಸಲು ಆರಂಭಿಸಿದ್ದು, ಇನ್ನೂ ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ಹೇಳಿಕೊಂಡಿದ್ದಾನೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net