ಫ್ಲಾಪ್​ ಸಾಲಿಗೆ ಕಮಲ್ ಹಾಸನ್​ 'ಥಗ್​ ಲೈಫ್'​! ಚಿತ್ರದ ಸೋಲು ಕುರಿತು ಕಡೆಗೂ ಮೌನಮುರಿದ ಮಣಿರತ್ನಂ | Thug Life

ವಿಜಯವಾಣಿ - 2025-06-23T191822.339
Published on

Thug Life: ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದು ಭಾಷೆ ಕುರಿತು ತಮಿಳು ನಟ ಕಮಲ್ ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆ ಕೇವಲ ಅವರಿಗೆ ಮಾತ್ರವಲ್ಲದೇ ಅವರು ಅಭಿನಯದ ಚಿತ್ರಕ್ಕೂ ಭಾರೀ ಮುಖಭಂಗವನ್ನೇ ಉಂಟುಮಾಡಿತು ಎಂಬುದಕ್ಕೆ ಥಗ್​ ಲೈಫ್​ಸೋಲೇ ಜ್ವಲಂತ ಸಾಕ್ಷಿ. ಕನ್ನಡಿಗರಲ್ಲಿ ಕ್ಷಮೆ ಕೇಳುವುದಿಲ್ಲ ಎಂಬ ಸೊಕ್ಕಿನ ಮಾತುಗಳನ್ನಾಡಿದ ಕಮಲ್​ಗೆ ಛೀಮಾರಿ ಹಾಕಿದ ಕನ್ನಡಿಗರು, ನಟನ ಚಿತ್ರವನ್ನು ನೋಡಲು ಬಯಸಲಿಲ್ಲ. ಅಂತೆಯೇ ಕರುನಾಡಿನಲ್ಲಿ ಥಗ್​ ಲೈಫ್​ ಸರಿಯಾದ ಓಪನಿಂಗ್ ಕೂಡ ಸಿಗಲಿಲ್ಲ. ತವರಿನಲ್ಲೇ ಅಬ್ಬರಿಸದ ಚಿತ್ರದ ಸೋಲು ಕುರಿತು ಕಡೆಗೂ ನಿರ್ದೇಶಕರು ಮೌನ ಮುರಿದಿದ್ದಾರೆ.

37 ವರ್ಷಗಳ ಬಳಿಕ ಸ್ಟಾರ್​ ನಿರ್ದೇಶಕ ಮಣಿರತ್ನಂ ಹಾಗೂ ಕಮಲ್ ಹಾಸನ್ ಕಾಂಬಿನೇಷನ್​ನಲ್ಲಿ ಮೂಡಿಬಂದ ಥಗ್ ಲೈಫ್​ ಖಂಡಿತ ಸೂಪರ್​ ಹಿಟ್​ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ದೊಡ್ಡ ವಿವಾದ ಹಾಗೂ ಚಿತ್ರದಲ್ಲಿ ಮನರಂಜನಾ ಅಂಶಗಳಿಲ್ಲದ ಕಾರಣ ಥಗ್​ ಲೈಫ್​ ಸಿನಿರಸಿಕರ ಮೆಚ್ಚುಗೆ, ಪ್ರಶಂಸೆಯಿಂದ ದೂರ ಉಳಿಯಿತು. ಬಾಕ್ಸ್​ ಆಫೀಸ್​ನಲ್ಲಿ ಹೀನಾಯ ಸೋಲು ಅನುಭವಿಸಿದ ಬಹುನಿರೀಕ್ಷಿತ ಚಿತ್ರದ ಕುರಿತು ಇಲ್ಲಿಯವರೆಗೆ ಎಲ್ಲಿಯೂ ಮಾತನಾಡದ ಮಣಿರತ್ನಂ, ಕಡೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ.

ಕ್ಷಮಿಸಿ....

ನಾಯಕನ್​ ರೀತಿ ಥಗ್​ ಲೈಫ್​ ನಿರೀಕ್ಷಿಸಿದ್ದ ಸಿನಿಪ್ರೇಕ್ಷಕರಲ್ಲಿ ನಾನು ಹೇಳುವುದೊಂದೇ. ನಮ್ಮನ್ನು ಕ್ಷಮಿಸಿ. ಹಿಂದಿನ ಇತಿಹಾಸ ಮತ್ತೇ ಸೃಷ್ಟಿಸುವಲ್ಲಿ ನಾವು ಎಡವಿದ್ದೀವಿ. ಹೊಸದೊಂದು ಪ್ರಯತ್ನಕ್ಕೆ ದಾಪುಗಾಲಿಟ್ಟೆವು. ಆದರೆ, ಅದು ಸರಿಯಾದ ಹಾದಿ ಹಿಡಿಯಲಿಲ್ಲ. ಅತಿಯಾದ ನಿರೀಕ್ಷೆಗಳನ್ನು ಹೊಂದಿದ್ದರಿಂದ, ನಮಗೆ ಅನಿರೀಕ್ಷಿತ ಫಲಿತಾಂಶಗಳು ಸಿಕ್ಕಿವೆ ಎಂದು ಹೇಳಿದರು.

ನಷ್ಟದಿಂದ ಒಟಿಟಿ ಕಡೆಗೆ

ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರೇಕ್ಷಕರಿಲ್ಲದೆ ಮುಖಭಂಗ ಅನುಭವಿಸಿದ ಥಗ್​ ಲೈಫ್​, ಇದೀಗ ಬಾಕ್ಸ್​ ಆಫೀಸ್​ನಲ್ಲಿ ಭಾರೀ ನಷ್ಟವನ್ನು ಎದುರಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಹೆಸರಾಂತ ಒಟಿಟಿ ಪ್ಲಾಟ್​ಫಾರ್ಮ್​ ಮೊರೆ ಹೋಗಿರುವ ಚಿತ್ರತಂಡ, ತಮ್ಮ ಚಿತ್ರವನ್ನು ನೆಟ್​ಫ್ಲಿಕ್ಸ್​ಗೆ ಮಾರಾಟ ಮಾಡಲು ಮುಂದಾಗಿದೆ. ಇದಕ್ಕಾಗಿ ಮಾತುಕತೆ ಕೂಡ ನಡೆಸಿದೆ. ಆದರೆ, ಮೊದಲ ಹಂತದ ಮಾತುಕತೆ ಯಾವುದೇ ಲಾಭ ತಂದುಕೊಟ್ಟಿಲ್ಲ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net