ಮಂಗಳೂರಿನಲ್ಲಿ ಹೃದಯಾಘಾತದಿಂದ 31 ವರ್ಷದ ಪೊಲೀಸ್​ ಕಾನ್ಸ್​ಟೆಬಲ್​ ಸಾವು

Police Constable
Published on

ಮಂಗಳೂರು: ಸಿಎಆರ್ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೋಮನಗೌಡ ಚೌಧರಿ (31) ಮೃತ ದುರ್ದೈವಿ. ಮಂಗಳೂರು ಸಿಎಆರ್ ತುಕಡಿಯ ಹೆಡ್ ಕಾನ್ಸ್​ಟೆಬಲ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಮೇಲಾಧಿಕಾರಿಗೆ ಜ್ವರ ಇದ್ದ ಕಾರಣ ಅವರನ್ನು ಆಸ್ಪತ್ರೆ‌ ಬಿಟ್ಟು ಜೀಪ್ ಬಳಿ ಬಂದಾಗ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ವೆನ್ಲಾಕ್​ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಮೃತ ಸೋಮನಗೌಡ ಕೋವಿಡ್​ ಸಂದರ್ಭದಲ್ಲಿ ಸ್ವಂತ ಹಣದಿಂದ ಬಡವರಿಗೆ ರೇಷನ್ ಹಂಚಿದ್ದರು. ಅಲ್ಲದೆ, ವರ್ಷಕ್ಕೆ ಎರಡು ಬಾರಿ ರಕ್ತದಾನ ಸಹ ಮಾಡುತ್ತಿದ್ದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಒಳ್ಳೆಯ ಸಿಬ್ಬಂದಿ ಎಂಬ ಮೆಚ್ಚುಗೆ ಗಳಿಸಿದ್ದರು.

ಸೋಮನಗೌಡ ಸಾವಿಗೆ ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಇಂದು ಮಂಗಳೂರಿನಲ್ಲೇ ಸೋಮನಗೌಡ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net