ಹುಲಿಕಲ್ ನಲ್ಲಿ ಇಂದಿನಿಂದ ಮಂದೇವಮ್ಮ ಜಾತ್ರೆ

Published on


ರಾಮನಗರ: ಮಾಗಡಿ ತಾಲೂಕು ಕುದೂರು ಹೋಬಳಿ ಹುಲಿಕಲ್‌ನಲ್ಲಿ ಮಂದೇವಮ್ಮ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭಗೊಂಡಿದೆ.

ಏ.28ರಿಂದ ಮೇ.2ವರೆಗೂ ಗ್ರಾಮದ ಮಂದೇವಮ್ಮ ಮತ್ತು ಕೊಲ್ಲಾಪುರದಮ್ಮ ದೇವರ ಜಾತ್ರಾ ಮಹೋತ್ಸವ ನಡೆಯಲಿದೆ.

28ರಂದು ಮಂದೇವಮ್ಮ ದೇವಿಯ ಉಪಾರ, ಏ.29ರ ಸೋಮವಾರ ಮಂದೇವಮ್ಮ ಅಗ್ನಿಕೊಂಡೋತ್ಸವ, ಮತ್ತು ಏ.30ರಂದು ಮಂಗಳವಾರ ಹಗಲು ಪರುಷೆ ನಡೆಯಲಿದೆ.

ಮೇ 1ರಂದು ಕೊಲ್ಲಾಪುರದಮ್ಮ ದೇವರ ಕೊಂಡೋತ್ಸವ ಆರತಿ ಸೇವೆ ನೆರವೇರಲಿದೆ. ಮೇ 2 ಗುರುವಾರ ಹಗಲು ಪರುಷೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net