Saif Ali Khan ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಮುಖ ಆರೋಪಿ ಅರೆಸ್ಟ್​!

Saif Ali Khan
Published on

ಮುಂಬೈ: ನಟ ಸೈಫ್​ ಅಲಿ ಖಾನ್​ (Saif Ali Khan) ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಘಟನೆ ನಡೆದ 72 ಗಂಟೆಗಳ ಬಳಿಕ ಥಾಣೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಬಿಜೋಯ್ ದಾಸ್ ಎಂದು ಗುರುತಿಸಲಾಗಿದ್ದು, ಈತ ಥಾಣೆಯ ಕಾಸರ್ವಾಡಾವಳಿಯ ಹಿರಾನಂದನಿ ಎಸ್ಟೇಟ್​ನಲ್ಲಿ ಅಡಗಿದ್ದ ಎಂದು ವರದಿಯಾಗಿದೆ. 

ಥಾಣೆಯ ಬಾರ್​ ಒಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಘಟನೆ ನಡೆದ ಬಳಿಕ ಪೊಲೀಸರಿಗ ಸಿಕ್ಕಿ ಬೀಳುವ ಭಯದಿಂದ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದ. ಕಲ್ಕತ್ತಾ ಮೂಲದವನಾದ ಆರೋಪಿಯು ಮಹಾರಾಷ್ಟ್ರದಿಂದ ಬೇರೆ ರಾಜ್ಯಕ್ಕೆ ಎಸ್ಕೇಪ್​ ಆಗಲು ತಯಾರಿ ನಡೆಸಿದ್ದ ಎಂದು ವರದಿಯಾಗಿದೆ.

ಆರೋಪಿ ಈ ಹಿಂದೆ ಕೆಲಸ ಮಾಡುತ್ತಿದ್ದ ಬಾರ್​ನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದರಿಂದ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕೆಲಸದಿಂದ ವಜಾ ಮಾಡಿದ ಬಳಿಕ ಆತ ಕಳ್ಳತನಕ್ಕೆ ಇಳಿದಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸ್​ ವಿಚಾರಣೆಯಲ್ಲಿ ಆರೋಪಿ ತಪ್ಪೊಪ್ಪಿಕೊಂಡಿರುವುದು ಖಾತ್ರಿಯಾಗಿದೆ.

ಜನವರಿ 16ರ ಮುಂಜಾನೆ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಆರೋಪಿ ದಾಳಿ ನಡೆಸಿದ್ದ. ಆರು ಬಾರಿ ಇರಿತಕ್ಕೊಳಗಾಗಿದ್ದ ಸೈಫ್‌ ಅವರನ್ನು ಆಟೋರಿಕ್ಷಾದಲ್ಲಿ ನಗರದ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡಿ, ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಅವರ ಬೆನ್ನುಮೂಳೆಯಿಂದ ಆಪರೇಷನ್​ ಮಾಡಿ 2.5 ಇಂಚಿನ ಚಾಕುವಿನ ತುಂಡನ್ನು ತೆಗೆಯಲಾಗಿತ್ತು. ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್​ ಅಲಿ ಖಾನ್​ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net