ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ವರುಣನ ಆರ್ಭಟ; ಕರ್ನಾಟಕ Weather Forecast ಪೂರ್ತಿ ವಿವರ ಹೀಗಿದೆ

Heavy Rain
Published on

ಬೆಂಗಳೂರು: ಈಗಾಗಲೇ ಚಳಿಯಿಂದ ನಡುಗುತ್ತಿರುವ ಸಿಲಿಕಾನ್​ ಸಿಟಿ ಮಂದಿಗೆ ವರುಣ ದೇವ ಬೆಳಂ ಬೆಳಗ್ಗೆ ಶಾಕ್​ ನೀಡಿದ್ದು, ಸೂರ್ಯೋದಯಕ್ಕೂ ಮೊದಲೇ ಬೆಂಗಳೂರಿನಲ್ಲಿ ಮಳೆಯಾಗಿದೆ. ಮೈ ನಡುಗಿಸುವ ಚಳಿಯ ನಡುವೆ ಬೆಂಗಳೂರಿನಲ್ಲಿ ಮಳೆಯಾಗಿದ್ದು,  ತಂಪಾದ ವಾತಾವರಣಕ್ಕೆ ರಾಜ್ಯ ರಾಜಧಾನಿ ಸಾಕ್ಷಿಯಾಗಿದೆ.

ಬೆಳಗ್ಗೆ 6 ಗಂಟೆಯಿಂದ ಚಾಮರಾಜಪೇಟೆ, ರಾಜಾಜಿನಗರ, ಶಾಂತಿನಗರ, ಕೆಆರ್​ ಮಾರುಕಟ್ಟೆ, ವಿಜಯನಗರ, ಯಶವಂತಪುರ, ವಿಜಯನಗರ, ಕುಮಾರಸ್ವಾಮಿ ಲೇಔಟ್‌, ಮಾದವಾರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಬಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಹಲವಡೆ ಮಳೆಯಾಗಲಿದೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (Weather Forecast) ನೀಡಿದೆ.

Rains

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Weather Forecast) ನೀಡಿದ್ದು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಬೆಳಗ್ಗೆ 6 ಗಂಟೆಯಿಂದ ನಗರದ ಹಲವು ಭಾಗದಲ್ಲಿ ಮಳೆರಾಯ ಎಂಟ್ರಿಯಾಗಿದ್ದಾನೆ. ಮುಂಜಾನೇ ಎದ್ದು ವಾಕಿಂಗ್ ಹೊರಟವರಿಗೆ, ದಿನ ನಿತ್ಯದ ಕೆಲಸಗಳಿಗೆ ಹೊರಟಿದ್ದ ಜನರಿಗೆ ಮಳೆಯಿಂದಾಗಿ ತೊಂದರೆಯಾಗಿದೆ. ಅಲ್ಲದೇ ವಾಹನ ಸವಾರರು ಮಳೆಯಿಂದಾಗಿ ಪರದಾಡುವಂತಾಗಿದೆ. ಮಕರ ಸಂಕ್ರಾಂತಿಯಂದು ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿತ್ತು. ಅಲ್ಲದೇ ರಾಜ್ಯಾದ್ಯಂತ ಈಗಲೂ ಚಳಿಯ ವಾತಾವರಣ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net