ಪಹಲ್ಗಾಮ್ ಉಗ್ರರಿಗೆ ಆಶ್ರಯ ನೀಡಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಹೋಗಿ ನದಿಗೆ ಹಾರಿ ಸಾವು:Video Viral

Video Viral
Published on

Jammu and Kashmir: ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ್ದ ವ್ಯಕ್ತಿಯೊಬ್ಬನು ಭದ್ರತಾ ಪಡೆಗಳಿಂದ (Video Viral) ತಪ್ಪಿಸಿಕೊಳ್ಳುವಾಗ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾನುವಾರ (ಮೇ.5) ನಡೆದಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗಾಗಿ ಸೇನೆಯು ತೀವ್ರ ಶೋಧವನ್ನು ಮುಂದುವರೆಸಿದ್ದು, ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರ ಮನೆಗಳನ್ನು ಕೂಡ ಸೇನೆ ನಾಶಪಡೆಸಿದೆ. ನಂತರ ಕಾರ್ಯಾಚರಣೆಯಲ್ಲಿ ಭಯೋತ್ಪಾದರಿಗೆ ಆಶ್ರಯ ನೀಡಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದಿದ್ದು, ಆತನನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ .

ವಿಚಾರಣೆಯ ವೇಳೆ ಕುಲ್ಗಮ್ ಜಿಲ್ಲೆಯ ತಂಗ್ಮಾರ್ಗ್ ಕಾಡಿನಲ್ಲಿ ಅಡಗಿರುವ ಭಯೋತ್ಪಾದಕರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಿದ್ದಾಗಿ ಇಮ್ತಿಯಾಜ್ ಅಹ್ಮದ್ ಮಾಗ್ರೆ (23)ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆ ಜಂಟಿಯಾಗಿ ಆ ಪ್ರದೇಶಕ್ಕೆ ಹೋಗುತ್ತಿದ್ದಾಗ ಮಾರ್ಗದರ್ಶಕರಾಗಿದ್ದ ಮಾಗ್ರೆ ಇದ್ದಕ್ಕಿದ್ದಂತೆ ವೇಷವ್ ನದಿಗೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸಾವನ್ನಪ್ಪಿದ್ದಾನೆ.

ಇಲ್ಲಿದೆ ನೀಡಿ ವಿಡಿಯೋ,

ಇದಕ್ಕೆ ಭದ್ರತಾ ಪಡೆಗಳೇ ಕಾರಣ ಎಂಬ ಆರೋಪಗಳು ಬಂದ ನಂತರ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಬೆಳಕಿಗೆ ಬಂದಿದ್ದು, ಆ ವ್ಯಕ್ತಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತಾನಾಗಿಯೇ ನದಿಗೆ ಹಾರಿದ್ದು, ಅವನ ಸಾವಿಗೆ ಸೇನೆ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ.

ಈ ವಿಡಿಯೋದಲ್ಲಿ, ಮಾಗ್ರೆ ಈಜಲು ಪ್ರಯತ್ನಿಸುತ್ತಿರುವುದು ಕಂಡುಬಂದಿದ್ದು, ಆದರೆ ನದಿಯಲ್ಲಿ ನೀರಿನ ಹರಿವು ತುಂಬಾ ಜೋರಾಗಿದ್ದರಿಂದ ಅವನು ನೀರಿನಲ್ಲಿ ಮುಳುಗಿ ಸತ್ತಿದ್ದಾನೆ. ಈ ಇಡೀ ಘಟನೆ ವಿಡಿಯೋದಲ್ಲಿ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಸುಳ್ಳು ಮಾಹಿತಿ ಹರಡದಂತೆ ಭದ್ರತಾ ಪಡೆಗಳು ಎಚ್ಚರಿಕೆ ನೀಡಿವೆ. ಮಾಗ್ರೆ ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಮತ್ತು ಅದಕ್ಕೆ ಭದ್ರತಾ ಪಡೆಗಳನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಅವರು ಸ್ಪಷ್ಟಪಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net