ವಿಶ್ವದಲ್ಲಿ ಅತಿ ಹೆಚ್ಚು ಮದ್ಯ ಸೇವನೆ ಮಾಡುವ ದೇಶ ಯಾವುದು? ಭಾರತ ಎಷ್ಟನೇ ಸ್ಥಾನದಲ್ಲಿದೆ? Alcohol

Alcohol
Published on

Alcohol : ಪ್ರಸ್ತುತ ಆಧುನಿಕ ಜೀವನಶೈಲಿ ಹಾಗೂ ಸಾಂಸ್ಕೃತಿಕ ಬದಲಾವಣೆಗಳಿಂದಾಗಿ ಜನರು ಕೆಟ್ಟ ಅಭ್ಯಾಸಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ಈ ಜಗತ್ತಿನಲ್ಲಿ ನಡೆಯುವ ಅರ್ಧದಷ್ಟು ಅಪರಾಧಗಳಿಗೆ ಮದ್ಯಪಾನವೇ ಕಾರಣ. ಜಗತ್ತಿನಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅದರಿಂದಾಗುತ್ತಿರುವ ಅನಾಹುತಗಳು ಕೂಡ ಅಷ್ಟೇ ಹೆಚ್ಚಾಗುತ್ತಿದೆ.

ಮದ್ಯ ಮಾರಾಟವು ವಿಶ್ವದ ಅತಿದೊಡ್ಡ ವ್ಯವಹಾರಗಳಲ್ಲಿ ಒಂದಾಗಿದೆ. ಅಮೆರಿಕ, ಚೀನಾ, ರಷ್ಯಾ ಅಥವಾ ಭಾರತದಂತಹ ಪ್ರಬಲ ದೇಶಗಳಲ್ಲಿಯೂ ಸಹ ಇದೇ ರೀತಿಯ ಅಭ್ಯಾಸಗಳು ಅಸ್ತಿತ್ವದಲ್ಲಿವೆ. ಅದರಲ್ಲೂ ಭಾರತದಲ್ಲಿ ಮದ್ಯಪಾನವೇ ಸರ್ಕಾರದ ಪ್ರಮುಖ ಆದಾಯವಾಗಿದೆ.

ಅಂದಹಾಗೆ, ಮದ್ಯ ಸೇವನೆಯಲ್ಲಿ ಮೊದಲ ಸ್ಥಾನದಲ್ಲಿರುವ ದೇಶಗಳು ಹೆಚ್ಚಾಗಿ ಸಣ್ಣ ಯುರೋಪಿಯನ್ ರಾಷ್ಟ್ರಗಳಾಗಿವೆ. ಹಾಗಾದರೆ, ಜಗತ್ತಿನಲ್ಲಿ ಯಾವ ದೇಶವು ಅತಿ ಹೆಚ್ಚು ಮದ್ಯ ವ್ಯಸನಿಗಳನ್ನು ಹೊಂದಿದೆ? ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೊಲ್ಡೋವಾ

ಪೂರ್ವ ಯುರೋಪಿಯನ್ ದೇಶವಾದ ಮೊಲ್ಡೊವಾವನ್ನು ವಿಶ್ವದ ಅತಿ ಹೆಚ್ಚು ಮದ್ಯಪಾನ ಮಾಡುವ ದೇಶವೆಂದು ಪರಿಗಣಿಸಲಾಗಿದೆ. ಈ ದೇಶ 2.46 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಈ ದೇಶದ ಪ್ರತಿಯೊಬ್ಬ ನಾಗರಿಕ ವರ್ಷಕ್ಕೆ ಸರಾಸರಿ 15.2 ಲೀಟರ್ ಮದ್ಯವನ್ನು ಕುಡಿಯುತ್ತಾನೆ. ಇದು ಸರಿಸುಮಾರು ವಾರ್ಷಿಕವಾಗಿ 100 ಬಾಟಲಿಗಳಿಗಿಂತ ಹೆಚ್ಚು ವೈನ್ ಅಥವಾ 500 ಪಿಂಟ್ ಬಿಯರ್ ಕುಡಿಯುವಷ್ಟು.

ಲಿಥುವೇನಿಯಾ

ಈ ಪಟ್ಟಿಯಲ್ಲಿ ಲಿಥುವೇನಿಯಾ 2ನೇ ಸ್ಥಾನದಲ್ಲಿದೆ. ಇಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕ ವರ್ಷಕ್ಕೆ 15 ಲೀಟರ್ ಮದ್ಯ ಸೇವಿಸುತ್ತಾನೆ.

ಸೀಶೆಲ್ಸ್

ಯುರೋಪಿಯನ್ ರಾಷ್ಟ್ರಗಳು ಅತಿ ಹೆಚ್ಚು ಮದ್ಯಪಾನ ಮಾಡುವವರು. ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರವಾದ ಸೀಶೆಲ್ಸ್, ಪ್ರತಿ ವ್ಯಕ್ತಿಗೆ ವರ್ಷಕ್ಕೆ 13.8 ಲೀಟರ್ ಮದ್ಯ ಸೇವಿಸುತ್ತದೆ. ಅದೇ ರೀತಿ, ನೈಜೀರಿಯಾ ಏಳನೇ ಸ್ಥಾನದಲ್ಲಿದೆ, ಅಲ್ಲಿ ಸರಾಸರಿ ವಯಸ್ಕ ಪ್ರತಿ ವರ್ಷ 13.4 ಲೀಟರ್ ಮದ್ಯ ಸೇವಿಸುತ್ತಾನೆ.

ಜೆಕ್ ಗಣರಾಜ್ಯ

ಜೆಕ್ ಗಣರಾಜ್ಯದಲ್ಲಿ ವಾಸಿಸುವ ಜನರು ವರ್ಷಕ್ಕೆ 4.4 ಲೀಟರ್ ಮದ್ಯಪಾನ ಮಾಡುತ್ತಾರೆ. ಜೆಕ್ ಜನರು ವೈನ್​ಗಿಂತ ಬಿಯರ್ ಕುಡಿಯಲು ಹೆಚ್ಚು ಇಷ್ಟಪಡುತ್ತಾರೆ.

ಭಾರತ

ಭಾರತದಲ್ಲಿ ಜನಸಂಖ್ಯೆ ಹೆಚ್ಚು. ಆದರೆ ಮದ್ಯ ಸೇವನೆ ಅಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಯುರೋಪಿಯನ್ ದೇಶಗಳಿಗಿಂತಲೂ ಭಾರತದಲ್ಲಿ ಮದ್ಯ ಸೇವಿಸುವವರ ಪ್ರಮಾಣ ತುಂಬಾ ಕಡಿಮೆ ಇದೆ. ಈ ಪಟ್ಟಿಯಲ್ಲಿ ಭಾರತಕ್ಕೆ 103 ನೇ ಸ್ಥಾನ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net