ಗಂಡಬಿಟ್ಟು ತವರಿಗೆ ಬಂದ ಮಗಳಿಗೆ ಬ್ಯಾಂಡ್-ಬಾಜಾ-ಬಾರಾತ್‌ ಸ್ವಾಗತ!

daughter
Published on

ರಾಂಚಿ(ಜಾರ್ಖಂಡ್): ಮದುವೆ ಮಾಡಿ ಗಂಡನ ಮನೆಗೆ ಮಗಳನ್ನು ಕಳೂಹಿಸುವಾಗ ಮೇಳ ಡೋಲು ಭಾರಿಸುವುದನ್ನು ನೋಡಿರುತ್ತೀರಿ. ಆದರೆ ಅತ್ತೆ ಮನೆಯಲ್ಲಿ ನೀಡಿದ ಚಿತ್ರಹಿಂಸೆ ಕಂಡು ಹೆತ್ತವರು ಅದೇ ಸಂತೋಷದಿಂದ ತನ್ನ ಮಗಳನ್ನು ಮನೆಗೆ ಶಾಶ್ವತವಾಗಿ ಮರಳಿ ಕರೆತರುವುದನ್ನು ನೀವು ಎಲ್ಲಿಯಾದರೂ ನೋಡಿದ್ದೀರಾ? ಇಲ್ಲ ಇಲ್ಲ… ಆದರೆ ಅದು ಸಂಭವಿಸಿದೆ. ಪ್ರಕರಣವು ರಾಂಚಿಯ ಕೈಲಾಶ್ ನಗರದಲ್ಲಿ ನಡೆದಿದ್ದು, ಈ ತಂದೆ ಸಮಾಜಕ್ಕೆ ವಿಭಿನ್ನ ಸಂದೇಶ ನೀಡಿದ್ದಾರೆ.

ಅಲ್ಲಿ ತಂದೆ ಪ್ರೇಮ್ ಗುಪ್ತಾ ತನ್ನ ಮಗಳು ಸಾಕ್ಷಿಯನ್ನು ಆಕೆಯ ಅತ್ತೆಯ ಮನೆಯಿಂದ ತಮ್ಮ ಮನೆಗೆ ಬಂದಾಗ ಬ್ಯಾಂಡ್-ಬಾಜಾ-ಬಾರಾತ್‌ನೊಂದಿಗೆ ಮನೆಗೆ ಮರಳಿ ಕರೆದುಕೊಂಡರು. ಅಳಿಯ ಸಚಿನ್ ತನ್ನ ಮಗಳಿಗೆ ಮೋಸ ಮಾಡಿದ್ದಾನೆ ಎಂದು ಪ್ರೇಮ್ ಗುಪ್ತಾ ಆರೋಪಿಸಿದರು. ಅವನಿಗೆ ಮೊದಲೇ ಮದುವೆಯಾಗಿತ್ತು. ತಿಳಿಯದೆ ನಮ್ಮ ಮಗಳನ್ನು ವಿವಾಹ ಮಾಡಿಕೊಟ್ಟೆವು. ಮತ್ತೊಂದು ಮೂರನೇ ಮದುವೆಯೂ ಆದ. ಆದರೆ ಸಾಕ್ಷಿ ಜೊತೆ ಬಾಳಲಿಲ್ಲ. ಹಾಗಾಗಿ ಮಗಳನ್ನು ಗೌರವದಿಂದ ವಾಪಸ್ ಕರೆತಂದೆವು ಎಂದು ಅವರು ತಮ್ಮ ಫೇಸ್‌ಬುಕ್ ನಲ್ಲಿ ವೀಡಿಯೊವನ್ನು ಹಂಚಿಕೊಂಡು ಬರೆದಿದ್ದಾರೆ.

ನಿಮ್ಮ ಮಗಳ ಮದುವೆಯನ್ನು ಆಡಂಬರ ಮತ್ತು ಅದ್ಧೂರಿಯಾಗಿ ಮಾಡುವುದಲ್ಲ, ಮಗಳನ್ನು ಪತಿ ಮತ್ತು ಆತನ ಮನೆಕಡೆಯವರು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಒಂದು ವೇಳೆ ಸರಿಯಾಗಿ ನಡೆಸಿಕೊಳ್ಳದಿದ್ದರೆ ಹೆಣ್ಣುಮಕ್ಕಳು ಬಹಳ ಅಮೂಲ್ಯವಾದ ಕಾರಣ ಮನೆಗೆ ವಾಪಸ್​ ಕರೆತರಬೇಕು. ಅದೂ ಆಕೆಯನ್ನು ಗೌರವ ಮತ್ತು ಘನತೆಯೊಂದಿಗೆ ಕರೆತಂದು ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಪ್ರೇಮ್ ಗುಪ್ತಾ ಬರೆದುಕೊಂಡಿದ್ದಾರೆ. ಅವರನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net