

ತೆಲಂಗಾಣ: ಹಿರಿಯ ಸಹೋದರನ ಪತ್ನಿಯೊಂದಿಗೆ ತಾನು ಯಾವುದೇ ರೀತಿಯ ಅಕ್ರಮ ಸಂಬಂಧ ಹೊಂದಿಲ್ಲ ಎಂಬುದನ್ನು ನಿರೂಪಿಸಲು ವ್ಯಕ್ತಿಯೊಬ್ಬ ಅಗ್ನಿ ಪರೀಕ್ಷೆ ಎದುರಿಸಿದ್ದಾನೆ. ತೆಲಂಗಾಣದ ವ್ಯಕ್ತಿಯೊಬ್ಬ ನನ್ನ ಪತ್ನಿಯೊಂದಿಗೆ ತಮ್ಮ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದ. ಈ ಬಗ್ಗೆ ಗ್ರಾಮ ಪಂಚಾಯತ್ಗೆ ದೂರು ನೀಡಿದ್ದಾನೆ. ಬಳಿಕ ಗ್ರಾಮದ ಮುಖಂಡರು ಸಭೆ ಕರೆದು ದೂರನ್ನುಆಲಿಸಿದ್ದಾರೆ.
ಆರೋಪ - ಪ್ರತ್ಯಾರೋಪಗಳನ್ನು ಆಲಿಸಿದ ಗ್ರಾಮ ಪಂಚಾಯತ್ ಮುಖಂಡರು, ಅಕ್ರಮ ಸಂಬಂಧ ಇಲ್ಲ ಎಂಬುದನ್ನು ನಿರೂಪಿಸಲು ಕೆಂಡದ ಮೇಲೆ ಇಟ್ಟ ಕಾದ ಕಬ್ಬಿಣವನ್ನು ಕೈಗೆತ್ತಿಕೊಂಡು, ಕೆಂಡದ ಮೇಲೆ ನಡೆಯಬೇಕು ಎಂದು ಸೂಚನೆ ನೀಡಿದ್ದಾರೆ. ಅದರಂತೆ ಆರೋಪಿ ಸ್ಥಾನದಲ್ಲಿದ್ದ ವ್ಯಕ್ತಿ ಮುಖಂಡರು ಸೂಚಿಸಿದಂತೆ ನಡೆದುಕೊಂಡಿದ್ದಾನೆ.
ಆಧುನಿಕ ಕಾಲಘಟ್ಟದಲ್ಲಿ ಈ ಘಟನೆ ನಡೆದಿರುವುದು ತೆಲಂಗಾಣದ ಬಂಜಾಪುಪಲ್ಲಿ ಎಂಬಲ್ಲಿ. ಸದ್ಯ ಆರೋಪಿತ ವ್ಯಕ್ತಿ ಕಾದ ಕಬ್ಬಿಣವನ್ನು ಕೈಗೆತ್ತಿಕೊಂಡು ನಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಈ ಘಟನೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ.
ಆರೋಪಿತ ವ್ಯಕ್ತಿ ಸೂಚನೆಯನ್ನು ಕೈಗೊಂಡ ನಂತರವೂ ಶಿಕ್ಷೆ ನೀಡಿದ್ದ ಗ್ರಾಮ ಪಂಚಾಯತ್ ಮುಖಂತರು ಸಂತೃಪ್ತರಾಗಿಲ್ಲ. ಹೀಗಾಗಿ ಸಹೋದರಿಬ್ಬರು ಮಾತುಕಥೆಯ ಮೂಲಕ ಸಮಸ್ಯೆ ಇತ್ಯರ್ಥಗೊಳಿಸಿ ಎಂದು ತಾಕೀತು ಮಾಡಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)