More

    VIDEO | ಬಾಬಾ ಎಲಾನ್ ಮಸ್ಕ್ ಕೀ ಜೈ; ಅದೊಂದು ಕಾರಣಕ್ಕೆ ಬೆಂಗಳೂರಿನ ಈ ಉದ್ಯೋಗಿಗಳಿಗೆ ಟ್ವಿಟರ್ ಸಿಇಓ ದೇವರಂತೆ!

    ಬೆಂಗಳೂರು: ಟ್ವಿಟರ್​​ನ್ನು ಖರೀದಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿರುವ ಟ್ರೆಂಡಿಂಗ್ ಹೆಸರು ಎಲಾನ್ ಮಸ್ಕ್. ಸಾವಿರಾರು ಸಂಖ್ಯೆಯಲ್ಲಿ ಟ್ವಿಟರ್​ನಲ್ಲಿದ್ದ ಉದ್ಯೋಗಿಗಳನ್ನು ವಜಾ ಮಾಡಿ ಮತ್ತು ಕೆಲ ಹಾಸ್ಯಾಸ್ಪದ ಟ್ವಿಟರ್ ಪೋಸ್ಟ್​ನಿಂದಾಗಿ ಎಲಾನ್ ಮಸ್ಕ್ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಐಟಿ ಸಿಟಿ ಬೆಂಗಳೂರಿನಲ್ಲಿ ಒಂದಷ್ಟು ಜನರು ಸೇರಿಕೊಂಡು ಎಲಾನ್ ಮಸ್ಕ್​ಗೆ ಫೋಟೋವಿಟ್ಟು ಪೂಜೆ ನೆರವೇರಿಸಿ, ಆರಾಧಿಸಿದ್ದಾರೆ.

    ಬೆಂಗಳೂರಿನ ಪುರುಷರ ಹಕ್ಕುಗಳ ಸಂಸ್ಥೆಯಾದ ಸೇವ್ ಇಂಡಿಯಾ ಫ್ಯಾಮಿಲಿ ಫೌಂಡೇಶನ್ (SIFF)ನ ಸ್ವಯಂಸೇವಕರು ಸೇರಿಕೊಂಡು ಎಲಾನ್ ಮಸ್ಕ್ ಫೋಟೋಗೆ ಅಗರಬತ್ತಿಯಿಂದ ಆರತಿ ಮಾಡಿದ್ದಾರೆ. ಜತೆಗೆ ಕೆಲ ಮಂತ್ರಗಳನ್ನೂ ಪಠಿಸಿದ್ದಾರೆ. ಸದ್ಯ ಎಲಾನ್ ಮಸ್ಕ್ ಫೋಟೋಗೆ ಪೂಜೆ ಮಾಡಿರುವ ವೀಡಿಯೋ ಟ್ವಿಟರ್​​ನಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವೀಡಿಯೋದಲ್ಲಿ “ಬಾಬಾ ಎಲಾನ್ ಮಸ್ಕ್ ಕೀ ಜೈ” ಎಂದು ಹೇಳಿರುವುದು ಕೇಳಿಸಿದೆ.

    ಇದನ್ನೂ ಓದಿ: Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!

    ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ್ದರಿಂದ ಸಂಸ್ಥೆಯ ಪುರುಷ ಉದ್ಯೋಗಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿದೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಮಸ್ಕ್ ಫೋಟೋ ಇರಿಸಿ ಪೂಜೆ ಮಾಡಿದ್ದಾರೆ.

    ಸದ್ಯ ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದು, ಶ್ರೀಮನ್ ನರಸಿಂಗ್ ಎಂಬುವವರು “SIFF ಸದಸ್ಯರು ಟ್ವಿಟ್ಟರ್ ಅನ್ನು ಖರೀದಿಸಲು ಮತ್ತು ಅಧಿಕಾರಿಗಳ ದಬ್ಬಾಳಿಕೆಯ ವಿರುದ್ಧ ಪುರುಷರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಗುರು ಎಲಾನ್ ಮಸ್ಕ್​ ಅವರನ್ನು ಪೂಜಿಸುತ್ತಿದ್ದಾರೆ” ಎಂದು ಕಮೆಂಟ್ ಮಾಡಿದ್ದಾರೆ.

    ಟ್ವಿಟರ್ ಬಳಕೆದಾರರೊಬ್ಬರು ವೀಡಿಯೋ ಶೇರ್ ಮಾಡಿಕೊಂಡು, “ಹೇ ಎಲಾನ್ ಮಸ್ಕ್, ನಮ್ಮ ದೇವರಾಗಿ ಆಯ್ಕೆಯಾದ್ದಕ್ಕೆ ಅಭಿನಂದನೆಗಳು. ನಮ್ಮನ್ನ ನಂಬಿ, ಇದು ನೀಲಿ ಟಿಕ್‌ಗಿಂತ ಹೆಚ್ಚು ಮೌಲ್ಯಯುತವಾಗಿದೆ” ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ಗಡ್ಡ, ಮೀಸೆ ಟ್ರಿಮ್; ಹೊಸ ಲುಕ್​ನೊಂದಿಗೆ ಕೇಂಬ್ರಿಡ್ಜ್ ವಿವಿಯಲ್ಲಿ ರಾಹುಲ್ ಗಾಂಧಿ ಉಪನ್ಯಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts