ಕೃಷಿ ವಿವಿಯಿಂದ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

1 Min Read
ಕೃಷಿ ವಿವಿಯಿಂದ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಆಸಕ್ತ ರೈತ, ರೈತ ಮಹಿಳೆ ಮತ್ತು ವಿಸ್ತರಣಾ ಕಾರ್ಯಕರ್ತರಿಂದ ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ರಾಜ್ಯಮಟ್ಟದ ಪ್ರಶಸ್ತಿಗಳು (ರಾಜ್ಯವ್ಯಾಪ್ತಿ): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ/ರೈತ ಮಹಿಳೆ ಪ್ರಶಸ್ತಿ, ಡಾ. ಎಂ.ಎಚ್. ಮರಿಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಕ್ಯಾನ್ ಬ್ಯಾಂಕ್ ಅತ್ಯುತ್ತಮ ಕೃಷಿಕ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಜಿಲ್ಲಾಮಟ್ಟದ ಪ್ರಗತಿಪರ ರೈತ/ ರೈತ ಮಹಿಳೆ ಪ್ರಶಸ್ತಿ, ತಾಲೂಕು ಮಟ್ಟದ ಯುವ ರೈತ/ಯುವ ರೈತ ಮಹಿಳೆ ಪ್ರಶಸ್ತಿಗೆ ಜು.31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಕೃಷಿ ವಿವಿಯಿಂದ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಕೃಷಿಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ. ನಿಗದಿತ ಅರ್ಜಿ ನಮೂನೆಯು ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಜಿಕೆವಿಕೆಯಲ್ಲಿರುವ ವಿಸ್ತರಣಾ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರಗಳಾದ ಹಾಡೋನಹಳ್ಳಿ (ದೊಡ್ಡಬಳ್ಳಾಪುರ), ಚಂದುರಾಯನಹಳ್ಳಿ (ಮಾಗಡಿ), ಕಂದಲಿ (ಹಾಸನ), ಕೊನೇನಹಳ್ಳಿ (ತಿಪಟೂರು), ವಿ.ಸಿ. ಾರ್ಮ್ (ಮಂಡ್ಯ), ಕುರುಬೂರು ಾರ್ಮ್ (ಚಿಂತಾಮಣಿ), ಹರದನಹಳ್ಳಿ (ಚಾಮರಾಜನಗರ) ಹಾಗೂ ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ (ನಾಗನಹಳ್ಳಿ- ಮೈಸೂರು) ದೊರೆಯುತ್ತದೆ.

ಅರ್ಜಿ ನಮೂನೆಯು ಕೃಷಿ ವಿವಿಯ ವೆಬ್‌ಸೈಟ್: ಡಿಡಿಡಿ.್ಠಚಿಚ್ಞಜಚ್ಝಟ್ಟಛಿ.ಛಿಛ್ಠ.ಜ್ಞಿ ಲಭ್ಯವಿರುತ್ತದೆ. ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಚೇರಿ, ಕೃಷಿ ವಿವಿ ಜಿಕೆವಿಕೆ, ಬೆಂಗಳೂರು-560 065 ದೂ: 080-23330153, ವಿಸ್ತರಣೆ: 401 ಸಂಪರ್ಕಿಸಬಹುದು.

See also  ಬೆಂಗಳೂರಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ; 48 ಗಂಟೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಂದ ಅರ್ಜಿ ಸಲ್ಲಿಕೆ..ಉದ್ಯೋಗ ಮಾರುಕಟ್ಟೆ ಎಷ್ಟು ಕೆಟ್ಟದಾಗಿದೆ? ಎಂದ ಕಂಪನಿ ಸಿಇಒ
Share This Article