ಉಗ್ರರ ದಾಳಿ ಬೆನ್ನಲ್ಲೇ ಕೇಕ್​ ತಿಂದು ಸಂಭ್ರಮಿಸಲು ಮುಂದಾಯಿತೇ ದೆಹಲಿಯ ಪಾಕ್​ ಹೈಕಮಿಷನ್​!? ಇಲ್ಲಿದೆ ವಿಡಿಯೋ ಸಾಕ್ಷಿ | Pahalgam

ವಿಜಯವಾಣಿ (56)
Published on

Pahalgam Terrorists Attack: ಏಪ್ರಿಲ್​ 22ರಂದು ಕಾಶ್ಮೀರದ ಪಹಲ್ಗಾಮ್​ನಲ್ಲಿ ಸಂಭವಿಸಿದ ಉಗ್ರರ ಭೀಕರ ಗುಂಡಿನ ದಾಳಿಗೆ 26 ಅಮಾಯಕರು ಜೀವಬಿಟ್ಟಿದ್ದಾರೆ. ಕರ್ನಾಟಕದ ಮೂವರು ಸೇರಿದಂತೆ ಒಟ್ಟು 26 ಮಂದಿಪ್ರಾಣವನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. 2019, ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಯೋಧರು ವೀರ ಮರಣ ಹೊಂದಿದ ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಬೆಚ್ಚಿಬೀಳಿಸಿದ ಮತ್ತೊಂದು ಹತ್ಯಾಕಾಂಡ ಮಂಗಳವಾರ ಪಹಲ್ಗಾಮ್‌ನ ಪ್ರವಾಸಿ ತಾಣದಲ್ಲಿ ನಡೆದಿದೆ. ಪುಲ್ವಾಮಾ ದಾಳಿಯ ನಂತರದಲ್ಲಿ ನಡೆದ ಭೀಕರ ದಾಳಿ ಇದಾಗಿದೆ.

ಅಂದು ಸೈನಿಕರನ್ನು ಗುರಿಯಾಗಿಸಿಕೊಂಡಿದ್ದ ಉಗ್ರರು ಇಂದು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆ ಹರಿಸಿದ್ದಾರೆ. ಉಗ್ರರ ಅಟ್ಟಹಾಸದ ಬೆನ್ನಲ್ಲೇ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಪ್ರಧಾನಿ ಮೋದಿ 1960ರಿಂದ ಉಭಯ ದೇಶಗಳ ನಡುವೆ ಬಲವಾಗಿ ಉಳಿದಿರುವ ಸಿಂಧೂ ನದಿ ಒಳ ಒಪ್ಪಂದ (ಐಡಬ್ಲ್ಯೂಟಿ), ಅಟ್ಟಾರಿ ಗಡಿ ಬಂದ್​, ವೀಸಾ ರದ್ದತಿ ಮತ್ತು ಪಾಕಿಸ್ತಾನಿ ಅಧಿಕಾರಿಗಳು ಭಾರತ ಬಿಟ್ಟು ಹೋಗುವಂತೆ ಆದೇಶ ಹೊರಡಿಸಿದ್ದಾರೆ. ಈ ಮಧ್ಯೆ ನವದೆಹಲಿಯಲ್ಲಿರುವ ಪಾಕ್​ ಹೈಕಮಿಷನ್​ನಲ್ಲಿ ಉದ್ಯೋಗಿಯೊಬ್ಬ ಕಚೇರಿಯೊಳಗೆ ಕೇಕ್​ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೆಹಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್​ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬ, ಪಹಲ್ಗಾಮ್​ನಲ್ಲಿ ಸಂಭವಿಸಿದ ಉಗ್ರರ ಗುಂಡಿನ ದಾಳಿ ಬೆನ್ನಲ್ಲೇ ಹೈಕಮಿಷನ್​ ಕಚೇರಿಯೊಳಗೆ ಕೇಕ್​ ಹಿಡಿದು ಒಳಗೆ ಹೋಗುತ್ತಿರುವ ದೃಶ್ಯ ಮಾಧ್ಯಮಗಳಿಗೆ ಸಿಕ್ಕಿದೆ. ತಕ್ಷಣವೇ ಉದ್ಯೋಗಿಯನ್ನು ತಡೆದು ಪ್ರಶ್ನಿಸಿದರೆ, ಆತನ ಬಳಿ ಉತ್ತರವೇ ಇಲ್ಲ. ಈ ಕೇಕ್​ ತೆಗೆದುಕೊಂಡು ಹೋಗುತ್ತಿರುವ ಉದ್ದೇಶವೇನು? ಎಂಬ ಪ್ರಶ್ನೆಗೆ ಉತ್ತರಿಸಲು ಹಿಂದೇಟು ಹಾಕಿದ ವ್ಯಕ್ತಿ, ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಉಗ್ರರ ದಾಳಿಯನ್ನು ಪಾಕ್​ ಹೈಕಮಿಷನ್​ ಕೇಕ್​ ತಿಂದು ಸಂಭ್ರಮಿಸಲು ಮುಂದಾಯಿತೇ ಎಂಬ ಅನುಮಾನಗಳು ಸದ್ಯ ಜನರಲ್ಲಿ ಮೂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net