

ಒಡಿಶಾ: ಒಡಿಶಾ ರಾಜಧಾನಿ ಕಟಕ್ನ ಛತ್ರಾ ಬಜಾರ್ನಲ್ಲಿ 10 ಕೆಜಿ ಟೊಮ್ಯಾಟೊ ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತ ಬಾಲಕರನ್ನು ಅಡವಿಟ್ಟು ಇಟ್ಟುಕೊಂಡು 4 ಕೆಜಿ ಟೊಮ್ಯಾಟೊ ಜತೆ ಪರಾರಿ ಆಗಿದ್ದಾನೆ. ದೇಶಾದ್ಯಂತ ಟೊಮ್ಯಾಟೊ ಬೆಲೆಗಳು ಗಗನಕ್ಕೇರುತ್ತಿರುವ ನಡುವೆ ಒಡಿಶಾದಲ್ಲಿ ಈ ಘಟನೆ ಸಂಭವಿಸಿದೆ. ಒಡಿಶಾದ ಬಹುತೇಕ ಮಾರುಕಟ್ಟೆಗಳಲ್ಲಿ ಟೊಮ್ಯಾಟೊ ಪ್ರತಿ ಕೆ.ಜಿ.ಗೆ 200 ರೂ.ಯಂತೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ರೋಗದಿಂದ ಟೊಮ್ಯಾಟೊ ಇಳುವರಿ ಕುಸಿತ
ವರದಿಗಳ ಪ್ರಕಾರ, ವಂಚಕನು ಅಪ್ರಾಪ್ತ ಬಾಲಕರನ್ನು ವಾಶಿಂಗ್ ಮಶೀನ್ ಲೋಡ್ ಮಾಡುವ ನೆಪದಲ್ಲಿ ನೇಮಿಸಿಕೊಂಡಿದ್ದಾನೆ. ಈ ಸಂದರ್ಭ ಅವರಿಗೆ ರೂ 300 ಕೊಡುವುದಾಗಿ ಭರವಸೆ ನೀಡಿದ್ದನಂತೆ. ನಂತರ ಆತ ಬಾಲಕರನ್ನು ಮಾರುಕಟ್ಟೆಗೆ ಕರೆದೊಯ್ದು ತರಕಾರಿ ಅಂಗಡಿಯಲ್ಲಿ ಅಡವಿಟ್ಟು 4 ಕೆಜಿ ಟೊಮ್ಯಾಟೊ ಹೊತ್ತೊಯ್ದಿದ್ದಾನೆ.
ದುಷ್ಕರ್ಮಿಯು ಮಾರಾಟಗಾರರಿಂದ ನಾಲ್ಕು ಕೆಜಿ ಟೊಮ್ಯಾಟೊಗಳನ್ನು ಖರೀದಿಸಿದ್ದು ಅವುಗಳನ್ನು ತನ್ನ ಸಂಬಂಧಿಕರೊಬ್ಬರಿಗೆ ಕೊಟ್ಟ ನಂತರ ಇನ್ನೂ 10 ಕೆಜಿ ಟೊಮ್ಯಾಟೊ ಖರೀದಿಸುವುದಾಗಿ ಮಾರಾಟಗಾರನಿಗೆ ಹೇಳಿದ್ದನಂತೆ.
ಒಂದು ಗಂಟೆ ಕಳೆದರೂ ವ್ಯಕ್ತಿ ಹಿಂತಿರುಗದಿದ್ದಾಗ, ತರಕಾರಿ ವ್ಯಾಪಾರಿಗೆ ಅನುಮಾನ ಬಂದು ಆ ವ್ಯಕ್ತಿಯ ಬಗ್ಗೆ ವಿಚಾರಿಸಿದ್ದಾನೆ. ಆದರೆ ಅಷ್ಟರಲ್ಲಿ ಅದಾಗಲೇ ತಡವಾಗಿ ಹೋಗಿದ್ದು ಮಾಲೀಕ ಪತ್ತೆ ಹಚ್ಚಲು ವಿಫಲರಾಗಿದ್ದಾರೆ. ಆ ವ್ಯಕ್ತಿಯ ಗುರುತಿನ ಬಗ್ಗೆ ಮಾರಾಟಗಾರರು ಅಪ್ರಾಪ್ತ ಹುಡುಗರನ್ನು ಕೇಳಿದಾಗ, ಅವರಿಗೂ ಕಳ್ಳನ ಗುರುತು ತಿಳಿದಿಲ್ಲ ಎಂದಿದ್ದಾರೆ. ಅವರು ತಮ್ಮನ್ನು ವಾಶಿಂಗ್ ಮಶೀನ್ಅನ್ನು ಲೋಡ್ ಮಾಡಲು ಬಾಡಿಗೆಗೆ ಪಡೆದಿದ್ದಾರೆ ಎಂದು ಹೇಳಿದರು. ಒಟ್ಟಿನಲ್ಲಿ ಆತ ಒಂದೇ ಒಂದು ರೂ. ಖರ್ಚು ಮಾಡದೇ ಬರೋಬ್ಬರಿ 800 ರೂ. ಮೌಲ್ಯದ ಟೊಮ್ಯಾಟೊಗಳನ್ನು ಹಾಡಹಗಲೇ ಕದ್ದೊಯ್ದಿದ್ದಾನೆ ಎಂದೇ ಹೇಳಬಹುದು.
ಆಂಧ್ರ ಮೂಲದ ರೈತ ದಂಪತಿಗಳು 22 ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದು ಕೇವಲ 45 ದಿನಗಳಲ್ಲಿ ಬರೋಬ್ಬರಿ 3 ಕೋಟಿ ರೂ. ನಿವ್ವಳ ಲಾಭ ಪಡೆದಿದ್ದರು. ಅವರಿಗೆ, ಬೆಳೆ ಬೆಳೆಯಲು ಹೂಡಿಕೆ, ಮಧ್ಯವರ್ತಿಗೆ, ಸಾಗಾಟದ ಖರ್ಚು ಇತ್ಯಾದಿ ಎಲ್ಲವನ್ನೂ ಕೂಡಿಸಿ ಸುಮಾರು 4 ಕೋಟಿ ರೂ. ಗಳಿಸಿದ್ದರು. ಇದನ್ನೂ ಓದಿ: ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ! (ಏಜೆನ್ಸೀಸ್)