More

    ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!

    ಆಂಧ್ರಪ್ರದೇಶ: ಟೊಮ್ಯಾಟೊ ಬೆಲೆ ಗಗನಕ್ಕೇರಿರುವ ನಡುವೆ, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತ ದಂಪತಿಗಳು 40,000 ಬಾಕ್ಸ್ ಟೊಮ್ಯಾಟೊಗಳನ್ನು ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ 4 ಕೋಟಿ ರೂ. ಗಳಿಸಿದ್ದಾರೆ.

    ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!

    22 ಎಕರೆ ಕೃಷಿ ಭೂಮಿ ಹೊಂದಿರುವ ಟೊಮ್ಯಾಟೊ ಕೃಷಿಕ ಚಂದ್ರಮೌಳಿ, ಏಪ್ರಿಲ್ ಮೊದಲ ವಾರದಲ್ಲಿ ಟೊಮ್ಯಾಟೊ ಗಿಡವನ್ನು ಬಿತ್ತಿದ್ದಾರೆ. ಅವರು ಇಳುವರಿಯನ್ನು ವೇಗವಾಗಿ ಪಡೆಯಲು ಮಲ್ಚಿಂಗ್ ಮತ್ತು ಸೂಕ್ಷ್ಮ ನೀರಾವರಿ ವಿಧಾನಗಳಂತಹ ಸುಧಾರಿತ ತಂತ್ರಗಳನ್ನು ಅಳವಡಿಸಿದರು. ಜೂನ್ ಅಂತ್ಯದ ವೇಳೆಗೆ ಟೊಮ್ಯಾಟೊ ಗಿಡಗಳು ಇಳುವರಿ ನೀಡಿದ್ದರಿಂದ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

    ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!

    ಅವರು ತಮ್ಮ ಉತ್ಪನ್ನಗಳನ್ನು ತಮ್ಮ ಕೃಷಿಭೂಮಿಗೆ ಹತ್ತಿರದಲ್ಲಿರುವ ಕೋಲಾರದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಕಳೆದ 45 ದಿನಗಳಲ್ಲಿ 40,000 ಬಾಕ್ಸ್‌ಗಳನ್ನು ಮಾರಾಟ ಮಾಡಿದಾಗ ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್ ಟೊಮ್ಯಾಟೊ ಬೆಲೆ 1,000 ರಿಂದ 1,500 ರೂ. ಇದೆ. ಈ ಮೂಲಕ ಅವರು ಸುಮಾರು 4 ಕೋಟಿ ರೂ. ಗಳಿಸಿದ್ದಾರೆ.

    tomato

    ಇದನ್ನೂ ಓದಿ: ವನ್ಯಜೀವಿ ಸಂರಕ್ಷಣೆಯೇ ಅರಣ್ಯ ಇಲಾಖೆಯ ಆದ್ಯ ಕರ್ತವ್ಯ: ಈಶ್ವರ ಖಂಡ್ರೆ

    ಟೊಮ್ಯಾಟೊ ಬೆಲೆ ಗಗನಕ್ಕೇರಿದ್ದರಿಂದ ಸಂತಸ ವ್ಯಕ್ತಪಡಿಸಿದ ಚಂದ್ರಮೌಳಿ, ‘ಇಲ್ಲಿಯವರೆಗೆ ಪಡೆದ ಉತ್ಪನ್ನದಿಂದ 4 ಕೋಟಿ ಆದಾಯ ಬಂದಿದೆ. ಒಟ್ಟಾರೆಯಾಗಿ ನನ್ನ 22 ಎಕರೆ ಜಮೀನಿನಲ್ಲಿ ಇಳುವರಿ ಪಡೆಯಲು 1 ಕೋಟಿ ರೂ. ಹೂಡಿಕೆ, ಕಮಿಷನ್ ಮತ್ತು ಸಾರಿಗೆ ಶುಲ್ಕ ಖರ್ಚಾಗಿದೆ. ಆದ್ದರಿಂದ, 3 ಕೋಟಿ ರೂ. ಲಾಭವನ್ನು ಪಡೆದಿದ್ದೇವೆ.

    ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!

    ಏತನ್ಮಧ್ಯೆ, ಭಾರತದ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಅಲ್ಲಿ ಮೊದಲ ದರ್ಜೆಯ ಟೊಮ್ಯಾಟೊ ಪ್ರತಿ ಕೆಜಿ ಬೆಲೆ ಶುಕ್ರವಾರ (ಜುಲೈ 28) 200 ರೂ.ಗೆ ಜಿಗಿದಿದೆ ಎಂದು ವರದಿಯಾಗಿದೆ.

    ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!

    ಇದನ್ನೂ ಓದಿ: ಜಿಲ್ಲಾದ್ಯಂತ ರಸ್ತೆ ಕೆಸರುಗದ್ದೆ, ಚರಂಡಿ ದುರ್ವಾಸನೆ!

    ಶುಕ್ರವಾರ ಟೊಮ್ಯಾಟೊ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಮಾರುಕಟ್ಟೆಗೆ ಆಗಮಿಸಿದ್ದರು. ಮೊದಲ ದರ್ಜೆಯ ಟೊಮ್ಯಾಟೊಗಳನ್ನು ಉತ್ತರದ ನಗರಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

    ಒಂದೂವರೆ ತಿಂಗಳಲ್ಲಿ 3 ಕೋಟಿ ರೂ. ನಿವ್ವಳ ಲಾಭ ಗಳಿಸಿದ ರೈತ ದಂಪತಿ!

    ಎರಡು ವಾರಗಳ ಹಿಂದೆ 25 ಕೆಜಿಯ ಕ್ರೇಟ್ ಕೆಜಿಗೆ 120 ರೂ.ನಂತೆ 3 ಸಾವಿರ ರೂ.ಗೆ ಮಾರಾಟವಾಗುತ್ತಿತ್ತು. ಆದರೆ, ಈಗ ಇತರೆ ರಾಜ್ಯಗಳಲ್ಲಿ ಟೊಮ್ಯಾಟೊ ಬೇಡಿಕೆ ಹೆಚ್ಚಿದ್ದು, ಕೆಜಿಗೆ 200 ರೂ. ಆಗಸ್ಟ್ ಅಂತ್ಯದವರೆಗೂ ಟೊಮ್ಯಾಟೊ ಬೆಲೆ ಗಗನಕ್ಕೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts