More

    OMG2 ಚಿತ್ರದಲ್ಲಿ ಬದಲಾಗುತ್ತಾ ಅಕ್ಷಯ್​ ಕುಮಾರ್ ಪಾತ್ರ? ಸೆನ್ಸಾರ್ ಮಂಡಳಿ ಹೇಳಿದ್ದಿಷ್ಟು…

    ನವದೆಹಲಿ: OMG 2 ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಬಹಳ ಹಿಂದೆಯೇ ದೃಢವಾಗಿದೆ. ಟ್ರೇಲರ್ ಮತ್ತು ಪೋಸ್ಟರ್‌ಗಳು ಕೂಡ ಅದನ್ನೇ ಸೂಕ್ಷ್ಮವಾಗಿ ತಿಳಿಸುತ್ತಿವೆ. ಫರ್ಸ್ಟ್​ಲುಕ್​ ಮತ್ತು ಪ್ರೀ ರಿಲೀಸ್​ ದೃಶ್ಯಗಳಲ್ಲಿ ಅಕ್ಷಯ್ ಕುಮಾರ್, ಶಿವನ ರೂಪದಲ್ಲೇ ಕಾಣಿಸಿಕೊಂಡು ಈಗಾಗಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

    OMG2 ಚಿತ್ರದಲ್ಲಿ ಬದಲಾಗುತ್ತಾ ಅಕ್ಷಯ್​ ಕುಮಾರ್ ಪಾತ್ರ? ಸೆನ್ಸಾರ್ ಮಂಡಳಿ ಹೇಳಿದ್ದಿಷ್ಟು…

    ಆದರೆ ಹೊಸ ವರದಿಯೊಂದರ ಪ್ರಕಾರ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಅಥವಾ ಸೆನ್ಸಾರ್​ ಮಂಡಳಿ ನಿರ್ದೇಶಕ ಅಮಿತ್ ರೈ, ಅಕ್ಷಯ್ ಕುಮಾರ್​ರ ಪಾತ್ರ ಭಗವಾನ್ ಶಿವನಾಗಿ ಇರಬಾರದು; ಬದಲಾಗಿ ಶಿವ ದೂತನಾಗಿ ಇರಬೇಕು ಎಂದು ಬಯಸಿದ್ದಾರೆ. ಕಳೆದ ವಾರ ಸೆನ್ಸಾರ್ ಮಂಡಳಿಯ ಪರಿಷ್ಕರಣೆ ಸಮಿತಿಯು ಚಿತ್ರಕ್ಕೆ ನೀಡಿದ 20 ಬದಲಾವಣೆಗಳು ಮತ್ತು ಕಟ್‌ಗಳಲ್ಲಿ ಇದೂ ಒಂದು ಎಂದು ತೋರುತ್ತಿದೆ.

    Pankaj Tripathi shines in a devotional avatar in 'OMG 2' first look | India  Forums

    ಇದನ್ನೂ ಓದಿ: ‘ಮಹಾಮೃತ್ಯುಂಜಯ ಮಂತ್ರ’ ಪಠಿಸಿ ನೆಟ್ಟಿಗರ ಮನಸ್ಸು ಗೆದ್ದ ವಿದೇಶಿ ಯುವತಿ; ವೈರಲ್ ಆಯ್ತು ಅಂಧ ಪ್ರತಿಭೆಯ ವಿಡಿಯೋ

    ಸೆನ್ಸಾರ್​ ಮಂಡಳಿಯು ಬದಲಾವಣೆಯು OMG2 ಚಿತ್ರದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಮೂಲವೊಂದು ಹೇಳಿಕೊಂಡಿದೆ. ಚಿತ್ರದ ಕೆಲವು ಭಾಗಗಳಲ್ಲಿ ನೀಲಿ ಬಣ್ಣದ ಚರ್ಮದ ಟೋನ್​ಗಳನ್ನು ತೋರಿಸಲಾಗಿದೆ. “ಇದರರ್ಥ OMG 2 ನಿರ್ಮಾಪಕರು ವಾಸ್ತವವಾಗಿ ಅಕ್ಷಯ್ ಕುಮಾರ್ ಶಿವನ ನೀಲಿ ಚರ್ಮದ ಮೈಬಣ್ಣವನ್ನು ಹೊಂದಿರುವಂತೆ ತೋರಿಸಿರುವ ಹಲವಾರು ಸೀನ್​ ಹಾಗೂ ಸೀಕ್ವೆನ್ಸ್​ಗಳನ್ನು ಬದಲಾಯಿಸಬೇಕಾಗುತ್ತದೆ ಅಥವಾ ಅಳಿಸಬೇಕಾಗುತ್ತದೆ” ಎಂದು ಮೂಲವೊಂದು ತಿಳಿಸಿದೆ. OMG 2 ತಂಡವು ನಿರ್ದೇಶಿಸಿದ ಬದಲಾವಣೆಗಳನ್ನು ಅನುಸರಿಸಲು ನಿರ್ಧರಿಸಿದರೆ, ಅದು ಪರಿಣಾಮವಾಗಿ ಚಿತ್ರ ಆಗಸ್ಟ್ 11ರಂದು ಬಿಡುಗಡೆ ಕಾಣುವುದು ಕಠಿಣವಾಗಬಹುದು.

    OMG vs OMG 2: Key differences between Akshay Kumar sequels that will make  you restless to watch the film

    “ಹೇಳಿರುವ ಸೀಕ್ವೆನ್ಸ್​ಗಳನ್ನು ತೆಗೆದುಹಾಕಿದರೂ ಅಥವಾ ಬಣ್ಣವನ್ನು ಡಿಜಿಟಲ್ ಆಗಿ ಬದಲಾಯಿಸಿದರೂ ಯಾವುದೇ ರೀತಿಯಲ್ಲಿ ಕೆಲಸ ಮಾಡಿದರೂ ಇದು ಹೆಚ್ಚುವರಿ ಸಮಯ ಮತ್ತು ಹಣವನ್ನು ಬೇಡುತ್ತದೆ” ಎಂದು ಮೂಲವೊಂದು ಹೇಳಿಕೊಂಡಿದೆ.

    ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ವಿಜಯ್​​ ಬಾಬು ಬಂಧನ 

    OMG 2 (2023) Movie: Reviews, Cast & Release Date - WeGreen Entertainment

    ಈ ವಾರದ ಆರಂಭದಲ್ಲಿ, ಆದೇಶಿಸಿದ ಬದಲಾವಣೆಗಳ ವಿರುದ್ಧ ಹೋರಾಡಲು ನಿರ್ಮಾಪಕರು ಚಿತ್ರದ ಬಿಡುಗಡೆಯನ್ನು ವಿಳಂಬಗೊಳಿಸಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮೂಲವೊಂದು ETimes ಗೆ, “ಸಮಿತಿ ಸೂಚಿಸಿದ ಬದಲಾವಣೆಗಳ ವಿರುದ್ಧ ಹೋರಾಡಲು ಮತ್ತು ಚಿತ್ರದ ಸರಿಯಾದ ಪ್ರಚಾರಗಳನ್ನು ಸಹ ಮಾಡಲು ಬಯಸುತ್ತಿರುವ ಕಾರಣ ಬಿಡುಗಡೆಯ ದಿನಾಂಕವನ್ನು ಬದಲಾಯಿಸುವ ಅಭಿಪ್ರಾಯವನ್ನು ನಿರ್ಮಾಪಕರು ಹೊಂದಿದ್ದಾರೆ” ಎಂದು ಮಾಹಿತಿ ನೀಡಿದೆ. ಹೀಗಾಗಿ ಚಿತ್ರ ಆಗಸ್ಟ್ 11ರಂದು ಬಿಡುಗಡೆಗೊಳ್ಳದೇ ದಿನಾಂಕ ಮುಂದೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    OMG 2 Teaser: Akshay Kumar's Old Statement On 'Religion' Goes Viral

    ಅಕ್ಷಯ್ ಕುಮಾರ್ ಮತ್ತು OMG 2 ನಿರ್ದೇಶಕ ಅಮಿತ್ ರೈ, ಯಾವುದೇ ವರದಿಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. OMG 2 ಚಿತ್ರದಲ್ಲಿ, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಶಿವನಾಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts