More

    ‘ಮಹಾಮೃತ್ಯುಂಜಯ ಮಂತ್ರ’ ಪಠಿಸಿ ನೆಟ್ಟಿಗರ ಮನಸ್ಸು ಗೆದ್ದ ವಿದೇಶಿ ಯುವತಿ; ವೈರಲ್ ಆಯ್ತು ಅಂಧ ಪ್ರತಿಭೆಯ ವಿಡಿಯೋ

    ನವದೆಹಲಿ: ಅಂಧ ಯುವತಿ ‘ಮಹಾಮೃತ್ಯುಂಜಯ ಮಂತ್ರ’ ಪಠಿಸುತ್ತಾ ಹಾಡಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಅಪಾರ ಪ್ರಶಂಸೆ ಮತ್ತು ಮೆಚ್ಚುಗೆ ಗಳಿಸಿಸುತ್ತಿದೆ. ಯುವತಿಯ ಹೆಸರು ಕ್ಯಾಸ್‌ಮೇ. ಸದ್ಯ ಈ ಯುವತಿಯ ಅಸಾಧಾರಣ ಪ್ರತಿಭೆ ನೋಡುಗರನ್ನು ಬೆರಗುಗೊಳಿಸಿದೆ. ಕ್ಯಾಸ್‌ಮೇ ಅವರ ಅಧಿಕೃತ ಇನ್ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ತಪ್ಪಿಲ್ಲದೆ ಮಂತ್ರವನ್ನು ಹೇಳಿರುವ ಪರಿ ಎಲ್ಲರನ್ನೂ ಆಕರ್ಷಿಸಿದೆ.

    ಈ ವಿಡಿಯೋ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಪಾರ ಜನಪ್ರಿಯತೆ ಗಳಿಸಿದೆ. ಈವರೆಗೆ 5.6 ಮಿಲಿಯನ್ ವೀಕ್ಷಣೆ ಪಡೆದಿರುವ ಈ ವಿಡಿಯೋದಲ್ಲಿ ಯುವತಿಯ ಕೌಶಲ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಬೆರಗಾಗಿದ್ದಾರೆ. ಕಾಮೆಂಟ್‌ಗಳ ವಿಭಾಗವಂತೂ ಮೆಚ್ಚುಗೆಯಿಂದ ತುಂಬಿ ಹೋಗಿದೆ.

    ಬಳಕೆದಾರರು “OMG ಬಹಳ ಚೆನ್ನಾಗಿದೆ, ದೇವರು ನಿಮ್ಮನ್ನು ಆಶೀರ್ವದಿಸಲಿ” “ವಿಡಿಯೋ ಬಹಳ ಸುಂದರವಾಗಿದ್ದು, ಗೂಸ್​​ಬಂಪ್​​​​ ಉಂಟಾಯಿತು” ಎಂದೆಲ್ಲಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

    #ಏಜೆನ್ಸೀಸ್

    ಅಶ್ಲೀಲ ವಿಡಿಯೋ ಹರಿಬಿಟ್ಟು ಬೆದರಿಕೆ: ಬಿಜೆಪಿ ಯುವ ಮೋರ್ಚಾ ಸದಸ್ಯರಿಂದ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts