ಗಣೇಶ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಬೈಕ್​ ಮೇಲೆ ಇದೆಂಥ ಸಾಹಸ! ಬೆಚ್ಚಿಬಿದ್ದ ನೆಟ್ಟಿಗರು..

ganesha 11
Published on

ಬೆಂಗಳೂರು: ಗಣೇಶ ಮೂರ್ತಿಗಳ ಸ್ಥಾಪನೆ, ವಿಸರ್ಜನೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದೇ ನಿಟ್ಟಿನಲ್ಲಿ ಇಲ್ಲೊಬ್ಬ ವ್ಯಕ್ತಿ ಗಣೇಶ ಮೂರ್ತಿಯನ್ನು ತನ್ನ ಚಲಿಸುವ ಬೈಕ್​ಮೇಲೆ ನಿಂತು ತಂದಿದ್ದಾನೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಆತನ ಸಾಹಸ ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ವೈರಲ್​ ಆಗಿರುವ ವೀಡಿಯೋದಲ್ಲಿ ಗಣೇಶನ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಚಲಿಸುವ ಬೈಕ್‌ ಮೇಲೆ ನಿಂತು ಹಾಡು ಹೇಳುತ್ತ ವ್ಯಕ್ತಿ ಬರುತ್ತಿರುವುದನ್ನು ಕಾಣಬಹುದು. ಈ ವ್ಯಕ್ತಿ ತನ್ನ ಕಾಲುಗಳ ಸಹಾಯದಿಂದ ಮಾತ್ರ ಬೈಕ್ ಅನ್ನು ನಿಯಂತ್ರಿಸುತ್ತಾನೆ.

ಈ ವ್ಯಕ್ತಿ ಜನನಿಬಿಡ ರಸ್ತೆಯಲ್ಲಿ ಈತ ಈ ಅಪಾಯಕಾರಿ ಬೈಕ್ ಸ್ಟಂಟ್ ಮಾಡುತ್ತಿರುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. "ಅಯ್ಯೋ.. ಇವನ ಪ್ರತಿಭೆ ಸಾಮಾನ್ಯವಲ್ಲ" ಎನ್ನುತ್ತಿದ್ದಾರೆ. ಸದ್ಯ ಈ ವಿಡಿಯೋ 19 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net