ಮನುಷ್ಯ ನಡೆದು ಬಂದ ಹಾದಿ ಮರೆಯಬಾರದು

ಮನುಷ್ಯ ನಡೆದು ಬಂದ ಹಾದಿ ಮರೆಯಬಾರದು
Published on

ನಂಜನಗೂಡು: ಮನುಷ್ಯ ಎಷ್ಟೇ ಎತ್ತರಕ್ಕೆ ಹೋದರೂ ತಾವು ನಡೆದು ಬಂದ ಹಾದಿಯನ್ನು ಮರೆಯಬಾರದು ಎಂದು ಚಾಮರಾಜನಗರ ಡಯೆಟ್ ಹಿರಿಯ ಉಪನ್ಯಾಸಕ ಲಿಂಗರಾಜೇ ಅರಸ್ ಹೇಳಿದರು.

ನಂಜನಗೂಡು ಪಟ್ಟಣದ ಜೆಎಸ್‌ಎಸ್ ಪದವಿ ಕಾಲೇಜು ಸಭಾಂಗಣದಲ್ಲಿ ಸಮೃದ್ಧಿ ಗೆಳೆಯರ ಬಳಗಗಳ ಒಕ್ಕೂಟ ಭಾನುವಾರ ಆಯೋಜಿಸಿದ್ದ ಲಿಂಗಾಯತ ಸಮುದಾಯದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪದೋನ್ನತಿ ಹೊಂದಿದ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಸಮಾಜದ ಒಳಿತಿನತ್ತ ಸೇವೆ ಮಾಡುವ ಮನಸ್ಸು ಹೊಂದಿರಬೇಕು ಎಂದರು.
ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ನಂದೀಶ್ ಹಂಚ್ಯಾ ಮಾತನಾಡಿ, ಸಮುದಾಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ವಿಶ್ರಾಂತ ಪ್ರಾಂಶುಪಾಲ ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ನೂತನ ನಿರ್ದೇಶಕ ಹಾಗೂ ಸಮೃದ್ಧಿ ಗೆಳಯರ ಬಳಗದ ಸ್ಥಾಪಕ ಅಧ್ಯಕ್ಷ ಕಲ್ಮಳ್ಳಿ ನಟರಾಜು ಮಾತನಾಡಿದರು.

ಚಾಮರಾಜನಗರ ಜಿಲ್ಲೆ ವೀರಶೈವ ಮಹಾಸಭಾ ಘಟಕದ ನೂತನ ಅಧ್ಯಕ್ಷ ಮೂಡ್ಲಪುರ ನಂದೀಶ್, ಗುಂಡ್ಲುಪೇಟೆ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ರವಿ ಕಮರಹಳ್ಳಿ, ನಂಜನಗೂಡು ತಾಲೂಕು ಅಧ್ಯಕ್ಷ ಕೆಂಪಣ್ಣ, ಚಾಮರಾಜನಗರ ವಿಶ್ವ ವಿದ್ಯಾಲಯ ಡೀನ್ ಡಾ.ಕೆ.ಸಿ.ಬಸವಣ್ಣ, ಬೆಂಗಳೂರಿನ ಸರ್ಟ್ ಉಪನಿರ್ದೇಶಕ ಸ್ವಾಮಿ ಶಿವಪುರ, ಮೈಸೂರು ಡಯಟ್ ಹಿರಿಯ ಶ್ರೇಣಿ ಉಪನ್ಯಾಸಕ ಅಮಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net