ಮನೆಗಳನ್ನೇ ಗುರಿಯಾಗಿಟ್ಟುಕೊಂಡು ದೀಪಾವಳಿ ರಾಕೆಟ್​ ಬಿಟ್ಟ ಭೂಪ!

Untitled
Published on

ಥಾನೆ: ವ್ಯಕ್ತಿಯೊಬ್ಬ ದೀಪಾವಳಿ ರಾಕೆಟ್​ಗಳನ್ನು ಅಪಾರ್ಟ್​ಮೆಂಟ್​ಗಳ ಕಡೆಗೆ ಗುರಿಯಿಟ್ಟು ಬಿಡುತ್ತಿದ್ದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಥಾನೆ ಪೊಲೀಸರು ಅಜ್ಞಾತ ವ್ಯಕ್ತಿಯ ಪತ್ತೆ ಕಾರ್ಯ ಶುರು ಮಾಡಿದ್ದಾರೆ.

ಮಹಾರಾಷ್ಟ್ರದ ಥಾನೆ ಬಳಿಯ ಉಲ್ಲಾಸನಗರದಲ್ಲಿ ಈ ನಡೆದ ಘಟನೆ ನಡೆದಿದ್ದು ಈ ವಿಡಿಯೋವನ್ನು ಇನ್ಸ್​ಟಾಗ್ರಾಂನಲ್ಲಿ ಬಿಡಲಾಗಿತ್ತು. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಅಪಾರ್ಟ್​ಮೆಂಟ್​ ಬಳಿ ನಿಂತುಕೊಂಡು ಅನೇಕ ದೀಪಾವಳಿ ರಾಕೆಟ್​ಗಳನ್ನು ಮನೆಗಳ ಕಡೆಗೆ ಗುರಿ ಮಾಡಿ ಬಿಡುತ್ತಿರುವುದು ಕಂಡುಬಂದಿದೆ.

ಸದ್ಯಕ್ಕೆ ವ್ಯಕ್ತಿಯ ಬಂಧನ ಆಗದಿದ್ದರೂ ಐಪಿಸಿ ಸೆಕ್ಷನ್ 285, 286 ಮತ್ತು 336 ಅಡಿಯಲ್ಲಿ ದೂರು ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net