More

    ಎದುರಾಳಿಗಳನ್ನೇ ವಿಶ್ವಾಸಕ್ಕೆ ತೆಗೆದುಕೊಂಡ ರಿಷಿ ಸುನಕ್!

    ಲಂಡನ್​: ಬ್ರಿಟನ್ನಿನ ಹೊಸ ಪ್ರಧಾನಿ ರಿಷಿ ಸುನಕ್ 10 ಡೌನಿಂಗ್ ಸ್ಟ್ರೀಟ್​ನಲ್ಲಿ ಅಧಿಕಾರ ವಹಿಸಿದ ಮೇಲೆ ಮೊದಲ ಭಾಷಣ ಮಾಡಿದರು. ‘ನಾನು ಪ್ರಧಾನಿ ಆಗಿದ್ದೇನೆ. ಈಗ ನಿಮ್ಮ ನಂಬಿಕಯನ್ನು ಗಳಿಸಿಕೊಳ್ಳಬೇಕು’ ಎಂದು ಹೇಳಿದರು.

    ರಿಷಿ ಸುನಕ್​ ಮಾಜಿ ಪ್ರಧಾನಿ ಲಿಝ್ರ ಟ್ರಸ್​ರನ್ನು ಅಭಿನಂದಿಸಿದರು. ನಂತರ ಜಾನ್ಸನ್​ ಬೋರೀಸ್​ರ ಸಾಧನೆಗಳನ್ನು ಹೊಗಳಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್, ಈ ಐತಿಹಾಸಿಕ ದಿನದಂದು ಪ್ರಧಾನಿ ಆಗಿ ಆಯ್ಕೆ ಆಗಿರುವ ರಿಷಿ ಸುನಕ್​ಗೆ ಅಭಿನಂದನೆಗಳು. ಇದು ಕನ್ಸರ್ವೇಟಿವ್​ ಪಕ್ಷದ ಎಲ್ಲರೂ ಒಮ್ಮತದಿಂದ ಸುನಕ್​ಗೆ ಬೆಂಬಲ ಸೂಚಿಸಬೇಕಾದ ಸಮಯ’ ಎಂದು ಟ್ವಿಟರ್​ನಲ್ಲಿ ಬರೆದುಕೊಂಡರು.ದೇವೆ

    ‘ನಮ್ಮ ಸರ್ಕಾರ ಪ್ರತಿ ಹಂತದಲ್ಲೂ ಸಮಗ್ರತೆ, ವೃತ್ತಿಪರತೆ ಮತ್ತು ಹೊಣೆಗಾರಿಕೆಯನ್ನು ಹೊಂದಿರುತ್ತದೆ. ನಮ್ಮ ದೇಶದ ಭವಿಷ್ಯ ರೂಪಿಸಲು, ಚಿಲ್ಲರೆ ರಾಜಕೀಯವನ್ನು ಬಿಟ್ಟು ಒಗ್ಗೂಡಿದರೆ ನಾವು ಅನೇಕ ಸಾಧನೆಗಳನ್ನು ಮಾಡಬಹುದು’ ಎಂದು ಸುನಕ್ ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts